ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿ ಮತಾಂತರವಾಗಿದ್ದಾರೆ. ಮತಾಂತರಗೊಂಡವರು ಮೂಲಭೂತವಾದಿಗಳಾಗುತ್ತಾರೆ ಅಂತವರು ಜಾಸ್ತಿ ಮಾತಾಡ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೋನರೆಡ್ಡಿ ಮೇಲೆ ವಾಗ್ದಾಳಿ ನಡೆಸಿದರು. ಕೋನರೆಡ್ಡಿ ಈಗ ಬೇರೆ ಬೇರೆ ಕಡೆ ಸುತ್ತಾಡಿ ಈಗ ಕಾಂಗ್ರೇಸ್ಸಿಗೆ ಬಂದಿದ್ದಾರೆ. ಅದಕ್ಕೆ ಜಾಸ್ತಿ ಮಾತಾಡುತ್ತಿದ್ದಾರೆ ಎಂದು ಹೇಳಿದರು. ಚುನಾವಣೆಗಳು ಬಂದಾಗಲೆಲ್ಲ ಕೋನರೆಡ್ಡಿಯಂತಹವರಿಗೆ ಮಹಾದಾಯಿ ವಿಚಾರ ನೆನಪಿಗೆ ಬರುತ್ತದೆ ಎಂದು ಕಟುಕಿದರು. ಮಹಾದಾಯಿ ನಮ್ಮ ಭದ್ಧತೆ ಎಂದ ಜೋಶಿ, ಕೇಂದ್ರ ಸರ್ಕಾರ ಯೋಜನೆ ಜಾರಿಗೆ ಶ್ರಮಿಸುತ್ತಿದೆ ಎಂದರು. ರಾಜಕಾರಣಕ್ಕಾಗಿ ಸುಖಾಸುಮ್ಮನೆ ಮಾತನಾಡುವದು ಆಗಬಾರದು ಎಂದು ಹೇಳಿದರು.
