ಸಿದ್ದರಾಮಯ್ಯ ಜನನಾಯಕ, ಜನಸಾಮಾನ್ಯರ ಪರ ಹೋರಾಟ ಮಾಡಿದವರು. ಅಂತವರು ಸಿಗಲ್ಲ. ಹಾಗಂತ ನನಗೇನೂ ಆಗಬೇಕಿಲ್ಲ. ಮಲ್ಲಿಕಾರ್ಜುನ ಒನ್ ಆಫ್ ದಿ ಗ್ರೇಟ್ ಮ್ಯಾನ್, ಖರ್ಗೆ ಪ್ರಧಾನಿ ಆಗಲಿ. ಹೀಗೆಂದು ಹೇಳಿದವರು ಕಾಂಗ್ರೆಸ್ಸಿನ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ.
ಕಾಂಗ್ರೇಸ್ ಸರ್ಕಾರ ಬಂದ ನಂತರ ಅತೀ ಹೆಚ್ಚು ಸುದ್ದಿ ಮಾಡಿರುವ ಬಸವರಾಜ ರಾಯರೆಡ್ಡಿ. ಸರ್ಕಾರದ ವಿರುದ್ಧ ಪತ್ರ ಬರೆದು ಸಮರ ಸಾರಿದ್ದ ರಾಯರೆಡ್ಡಿ ಇದೀಗ ಸಿದ್ದರಾಮಯ್ಯನವರ ಗುಣಗಾನ ಮಾಡಿದ್ದಾರೆ. ಸಿದ್ದರಾಮಯ್ಯ ಜನಪರ ಹೋರಾಟಗಾರ, ಅಂತವರು ಈಗ ಸಿಗಲ್ಲ ಎಂದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಪರ ಬ್ಯಾಟ್ ಬೀಸಿರುವ ರಾಯರೆಡ್ಡಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಒನ್ ಆಫ್ ದಿ ಗ್ರೇಟ್ ಮ್ಯಾನ್ ಎಂದು ಕರೆದಿದ್ದಾರೆ. ಖರ್ಗೆ ಅಂತವರು ಪ್ರಧಾನಿ ಆಗಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.