ನಿಯಮ ಮೀರಿ ನಿವೇಶನ ಹಂಚಿಕೆ, ಹೆಚ್ಚುವರಿ ನಿವೇಶನ ಸೃಷ್ಟಿ ಸೇರಿದಂತೆ ಬೀದರ ನಗರಾಭಿವೃದ್ಧಿ ಇಲಾಖೆಯಲ್ಲಿ ಆಕ್ರಮದ ವಾಸನೆ ಬಹಿರಂಗವಾಗಿದೆ. ಹಿಂದಿನ ಬುಡಾ ಅಧ್ಯಕ್ಷ ಬಾಬು ವಾಲಿ, ಆಯುಕ್ತ ಅಭಯ ಕುಮಾರ ಅವರು ಸರ್ಕಾರದ ಅನುಮೋದನೆ ಪಡೆದಿದ್ದಾರೆ, ಲೇಔಟ್‌ಗಳನ್ನು ಮಾಡಿ, ನಿಯಮ ಬಾಹಿರವಾಗಿ ನಿವೇಶನ ಹಂಚಿಕೆ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಆರೋಪ ಮಾಡಿದ್ದರು.
ಶಾಸಕರ ದೂರಿನ ಅನ್ವಯ ಕಲ್ಬುರ್ಗಿಯ ಪ್ರಾದೇಶಿಕ ಆಯುಕ್ತರು ತನಿಖೆಗೆ ಸಮಿತಿಯನ್ನು ನೇಮಿಸಿದೆ. ಸೆಪ್ಟೆಂಬರ್ 11 ರಿಂದ ಸಮಿತಿ ತನಿಖೆ ನಡೆಸಿ, ಕಡತಗಳ ಪರಿಶೀಲನೆ ನಡೆಸಿದೆ. ಧಾರವಾಡ ನಗರ ಹಾಗೂ ಗ್ರಾಮಾಂತರ ಯೋಜನೆಯ ಅಧಿಕಾರಿಗಳು ಬೀದರಗೆ ಬಂದಿದ್ದು, ಕೆಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
