ಹೈದ್ರಾಬಾದ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕಲ್ಯಾಣ ಕರ್ನಾಟಕದ ಅಮೃತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಹೈದ್ರಾಬಾದ ಕರ್ನಾಟಕದಲ್ಲಿ ಕ್ಯಾಬಿನೆಟ್ ಮೀಟಿಂಗ್ ಮಾಡುವದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
195 ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿದ್ದು, ಉದ್ಯೋಗ, ನೀರು ಹಾಗೂ ಬೆಳೆ ಪರಿಹಾರ ಕೊಡುವದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಎನ್ ಡಿ ಆರ್ ಎಫ್ ನಿಯಮಾವಳಿ ಪರಿಶೀಲನೆ ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ ಎಂದರು. ಪತ್ರಕ್ಕೆ ಇನ್ನು ಉತ್ತರ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮತ್ತೊಮ್ಮೆ ಪ್ರಧಾನಿಗಳಿಗೆ ಪತ್ರ ಬರೆದು ನೀರಾವರಿ ಸಮಸ್ಯೆಗಳ ಬಗ್ಗೆ ಎಲ್ಲ ಪಕ್ಷಗಳ ಸಭೆ ಕರೆಯುವಂತೆ ಮನವಿ ಮಾಡುತ್ತೇನೆ ಎಂದರು. ಬರಗಾಲ ಎದುರಿಸೋದಕ್ಕೆ ಪರಿಹಾರ ಕೇಳ್ತಿವಿ.
ಕಾವೇರಿ ಇಂದ 177.25 ಟಿ ಎಮ್ ಸಿ ನೀರು ಕೊಡಬೇಕೆಂದು ಇದೆ. ನಾವು ಇವತ್ತಿನ ವರೆಗೆ 37.7 ಟಿ ಎಮ್ ಸಿ ನೀರು ಬಿಟ್ಟಿದ್ದೀವಿ. 99 ಟಿ ಎಮ್ ಸಿ ನೀರು ಬಿಡಬೇಕಿತ್ತು. ಅಷ್ಟು ಬಿಟ್ಟಿಲ್ಲ ಎಂದರು. ನಮ್ಮ ಹತ್ತಿರ ನೀರಿಲ್ಲ ಎಲ್ಲಿಂದ ಬಿಡಬೇಕು ಎಂದರು. ನಮ್ಮ ಹತ್ತಿರ 53 ಟಿ ಎಮ್ ಸಿ ನೀರು ಮಾತ್ರ ಉಳಿದಿದೆ. ಅದರಲ್ಲಿ 33 ಟಿ ಎಮ್ ಸಿ ನೀರು ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
