ಇದು 5 ಜಿ, 6 ಜಿ ಜಮಾನಾ, ಟೂಡಿ, ತ್ರೀಡಿ ಫಿಲಂಗಳು ಬಂದಾಗಿವೆ. ಫಿಲಂ ಗಳ ಪಿಕ್ಚರ ಪರದೆಗಳು 70 ಎಮ್ ಎಮ್ ಗೆ ತಲುಪಿವೆ. ಪಿ ವಿ ಆರ್, ಐನಾಕ್ಸ್ ನಂತಹ ಐಷಾರಾಮಿ ಮತ್ತು ಅತ್ಯಾಧುನಿಕ ಥೇಟರಗಳ ಹೊಡೆತಕ್ಕೆ ಕುಂತಲ್ಲೆ ಜಗತ್ತನ್ನು ನೋಡುತ್ತಿದ್ದ ಮ್ಯಾಜಿಕ್ ಬಾಕ್ಸ್ ಇದೀಗ ಕಣ್ಮರೆಯಾಗಿವೆ.
“ಆಹಾಂ, ತಾಜ ಮಹಲ್ ನೋಡು” ” ಡೆಲ್ಲಿಯ ಲಾಲ್ ಕಿಲ ನೋಡು” ” ಕಿತ್ತೂರ ಚೆನ್ನಮ್ಮ ಬಂದ್ಲು ನೋಡು” ಹೀಗೆ ಇತಿಹಾಸದ ಬಗ್ಗೆ, ಐತಿಹಾಸಿಕ ಘಟನೆಗಳ ಬಗ್ಗೆ ಮನರಂಜನೆಯ ಮೂಲಕ ಜ್ಞಾನ ನೀಡುತ್ತಿದ್ದ ಮ್ಯಾಜಿಕ್ ಬಾಕ್ಸಗಳು ಈಗ ಕಾಣಸಿಗುವುದಿಲ್ಲ.
ಈಗ ಏನಿದ್ದರು, ಅಸಹ್ಯ ಹುಟ್ಟಿಸುವ ನೃತ್ಯಗಳು, ರಕ್ತ ಸಿಕ್ತ ಕಥಾ ಹಂದರ ಹೊಂದಿರುವ ಚಲನ ಚಿತ್ರಗಳು ಮಾತ್ರ…..