ದೇಶಾದ್ಯಂತ ಇವತ್ತು ವಿಶ್ವಕರ್ಮ ಜಯಂತಿಯನ್ನು ಅತೀ ವಿಜೃಂಭಣೆಯಿಂದ ಆಚರಿಸುತ್ತಿದ್ದು, ಈ ಶುಭ ಸಂದರ್ಭದಲ್ಲಿಯೇ ಧಾರವಾಡದಲ್ಲಿನ ಓಲ್ಡ್ ಡಿ ಎಸ್ಪಿ ಸರ್ಕಲ್.ಗೆ ವಿಶ್ವಕರ್ಮ ವೃತ್ತ ಎಂದು ನಾಮಕರಣ ಮಾಡಿ ಅಧಿಕೃತವಾಗಿ ಉದ್ಘಾಟಿಸಲಾಯಿತು.
ಈ ಹಿಂದೆ ಈರೇಶ ಅಂಚಟಗೇರಿ ಮೇಯರ್ ಆಗಿದ್ದ ಸಂದರ್ಭದಲ್ಲಿ ಈ ವೃತ್ತಕ್ಕೆ ವಿಶ್ವಕರ್ಮ ವೃತ್ತ ಎಂದು ನಾಮಕರಣ ಮಾಡಿ ಸರ್ವಾನುಮತದಿಂದ ಠರಾವ್ ಪಾಸ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ವೃತ್ತದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ, ಮೇಯರ ವೀಣಾ ಭರದ್ವಾಡ, ಮಾಜಿ ಮೇಯರ ಈರೇಶ ಅಂಚಟಗೇರಿ ವಿಶ್ವಕರ್ಮರ ಭಾವಚಿತ್ರಕ್ಕೆ ಗೌರವ ಸಲ್ಲಿಸುವ ಜೊತೆಗೆ ವೃತ್ತವನ್ನು ಅಧಿಕೃತವಾಗಿ ಉದ್ಘಾಟಿಸಿದರು.
ಇವತ್ತೇ ಪ್ರಧಾನಿ ನರೇಂದ್ರ ಮೋದಿ ಪಿಎಂ ವಿಶ್ವಕರ್ಮ ಯೋಜನೆಗೆ ಚಾಲನೆ ನೀಡಿದ ಹಿನ್ನಲೆಯಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ಪಾಲಿಕೆ ಸದಸ್ಯರಾದ ಸುರೇಶ ಬೇದರೆ, ಮಂಜುನಾಥ ಬಟ್ಟೆಣ್ಣವರ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಅಧ್ಯಕ್ಷ ಕಾಳಪ್ಪ ಬಡಿಗೇರ, ಅಖಿಲ ಭಾರತೀಯ ವಿಶ್ವಕರ್ಮ ಛಾತ್ರಾ ಯುವ ಸಂಘದ ಅಧ್ಯಕ್ಷ ಸಂತೋಷ ಬಡಿಗೇರ, ಹಿರಿಯರಾದ ಶಿವಣ್ಣ ಬಡಿಗೇರ, ವಸಂತ ಅರ್ಕಾಚಾರ, ಮೋಹನ ಅರ್ಕಸಾಲಿ, ವಿಠ್ಠಲ ಕಮ್ಮಾರ, ಮಂಜುನಾಥ ಬಡಿಗೇರ, ಸುವರ್ಣ ಪತ್ತಾರ, ಪದ್ಮಾವತಿ ಕಮ್ಮಾರ, ಸೋಮಶೇಖರ ಪಟ್ಟಣಕೋಡಿ, ಗುರುನಾಥ ಪತ್ತಾರ, ಶೇಖಪ್ಪ ಪತ್ತಾರ ಇತರರು ಭಾಗವಹಿಸಿದ್ದರು.