ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಬಿಜೆಪಿ ಪಕ್ಷಕ್ಕೆ ಗುಡ್ ಬೈ ಹೇಳಿ ಬಂದಿದ್ದೆ ತಡ. ಸೌಮ್ಯ ಸ್ವಭಾವದ ಶೆಟ್ಟರ ಅವರು ಬಿಜೆಪಿ ಮತ್ತು ಬಿಜೆಪಿ ನಾಯಕರ ಮೇಲೆ ಸಮರ ಸಾರಿದ್ದಾರೆ. ಇದೀಗ ಮಗ ಸಂಕಲ್ಪ ಶೆಟ್ಟರ, ಅಪ್ಪನ ಹಾದಿ ತುಳಿದಿದ್ದಾರೆ.
ರಾಜಕಾರಣದ ಅಂಗಳಕ್ಕೆ ಇಳಿದಿರುವ ಸಂಕಲ್ಪ ಶೆಟ್ಟರ, ಬಿಜೆಪಿ ಮೇಲೆ ಇನ್ನಿಲ್ಲದಂತೆ ವಾಕ್ಸಮರ ನಡೆಸಿದ್ದಾರೆ. ಬಿಜೆಪಿ ವರಿಷ್ಟ B L ಸಂತೋಷ ಗುರಿಯಾಗಿಟ್ಟುಕೊಂಡು ಒಂದರ ಮೇಲೆ ಒಂದರಂತೆ ಬಾಣ ಬಿಡುತ್ತಿದ್ದಾರೆ. ಮೊನ್ನೆಯವರೆಗೆ ಬಕೆಟ್ ಹಿಡಿದವರಿಗೆ ಬಿಜೆಪಿ ಟಿಕೇಟ್ ಎಂದು ಕಾಲು ಎಳೆದಿದ್ದ ಸಂಕಲ್ಪ ಶೆಟ್ಟರ ಇವತ್ತು ಬೇರೆ ವರಸೆ ತೆಗೆದಿದ್ದಾರೆ.
ಸಂಕಲ್ಪ ಶೆಟ್ಟರ, ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿರೋದ ಪಕ್ಷದ ನಾಯಕನ ಸ್ಥಾನಕ್ಕೆ ಮಾನದಂಡದ ಬಗ್ಗೆ ವ್ಯಂಗವಾಡಿದ್ದಾರೆ. ಜಗದೀಶ ಶೆಟ್ಟರ ವಿರುದ್ಧ ಯಾರು ಅತೀ ಹೆಚ್ಚು ಮಾತಾಡುತ್ತಾರೋ ಅವರು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕರಾಗುತ್ತಾರೆ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಬರೆದುಕೊಂಡಿರುವ ಸಂಕಲ್ಪ, ಕೆಳಗೆ ಇದು BL ಅವರ ಆದೇಶ ಎಂದು ಬರೆದಿದ್ದಾರೆ. ಸಂಕಲ್ಪ ಶೆಟ್ಟರ, ಪರೋಕ್ಷವಾಗಿ ಬಿ ಎಲ್ ಸಂತೋಷ ಅವರನ್ನು ಟಾರ್ಗೆಟ ಮಾಡಿದ್ದಾರೆ.