ಗಣೇಶ ಹಬ್ಬದ ನಿಮಿತ್ತ ವಿನಯ ಕುಲಕರ್ಣಿ ಅಭಿಮಾನಿಗಳ ಬಳಗದಿಂದ ಮಣ್ಣಿನ ಗಣಪತಿಗಳನ್ನು ಉಚಿತವಾಗಿ ಕೊಡಲಾಯಿತು. ವಿನಯ ಕುಲಕರ್ಣಿ ಹಾಗೂ ಹಿದಾಯತ ರಾಯಚೂರು ಅಭಿಮಾನಿ ಬಳಗದ ಸದಸ್ಯರು ನೂರಕ್ಕೂ ಹೆಚ್ಚು ಮಣ್ಣಿನ ಗಣಪತಿಗಳನ್ನು ಪುಕ್ಕಟೆಯಾಗಿ ನೀಡಿದರು. ತುಟ್ಟಿ ಕಾಲದಲ್ಲಿ ಹಬ್ಬ ಮಾಡುವದು ಹೇಗೆ ಎಂಬ ಚಿಂತೆಯಲ್ಲಿದ್ದವರು, ಉಚಿತವಾಗಿ ಕೊಟ್ಟ ಗಣೇಶನನ್ನು ತೆಗೆದುಕೊಂಡು ಹೋದರು. ಈ ಸಂದರ್ಭದಲ್ಲಿ ಬಸವರಾಜ ಜಾಧವ, ಹಿದಾಯತ ರಾಯಚೂರು, ನಾರಾಯಣ ಸುಳ್ಳದ, ಮಂಜುನಾಥ ಮಾನೆ, ಚಾಂದಸಾಬ ಮುಲ್ಲಾ, ಕಲಂದರ ಜಹಾಗಿರದಾರ, ಪ್ರತೀಕ ತೋಟದವರ, ರಫೀಕ್ ನದಾಫ್, ಪ್ರದೀಪ ಮರಬಸಣ್ಣವರ, ಆದಿಲ್ ಮಸ್ತಾನವಾಲೆ, ಪ್ರಥಮ ಅಬೋಲೆ ಸೇರಿದಂತೆ ಅನೇಕ ಯುವಕರು ಮಣ್ಣಿನ ಗಣೇಶನನ್ನು ಉಚಿತವಾಗಿ ನೀಡಿ, ಹಬ್ಬದ ಮೆರಗನ್ನು ಹೆಚ್ಚಿಸಿದರು.
