Download Our App

Follow us

Home » ಕಾನೂನು » ಸಾಮಾಜಿಕ ಮಾಧ್ಯಮ ಬಳಸಲು ವಯೋಮಿತಿ ನಿಗದಿ. ಕೇಂದ್ರಕ್ಕೆ ಕರ್ನಾಟಕ ಹೈಕೋರ್ಟ ಸಲಹೆ

ಸಾಮಾಜಿಕ ಮಾಧ್ಯಮ ಬಳಸಲು ವಯೋಮಿತಿ ನಿಗದಿ. ಕೇಂದ್ರಕ್ಕೆ ಕರ್ನಾಟಕ ಹೈಕೋರ್ಟ ಸಲಹೆ

ಸಾಮಾಜಿಕ ಮಾಧ್ಯಮ ಬಳಸಲು ಕನಿಷ್ಟ ವಯೋಮಿತಿ ನಿಗದಿ ಮಾಡುವಂತೆ ಕರ್ನಾಟಕ ಹೈಕೋರ್ಟ, ಕೇಂದ್ರ ಸರ್ಕಾರಕ್ಕೆ ಮೌಖಿಕ ಸಲಹೆ ನೀಡಿದೆ. ಟ್ವಿಟರ್ ಮಾಡಿದ ಮೇಲ್ಮನವಿ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜಿ ನರೇಂದರ ಮತ್ತು ವಿಜಯಕುಮಾರ ಎ ಪಾಟೀಲ್ ಅವರ ಪೀಠವು ಈ ಸಲಹೆ ನೀಡಿದೆ.

ಮಕ್ಕಳು, ಸಾಮಾಜಿಕ ಮಾಧ್ಯಮಕ್ಕೆ ಒಡ್ಡಿಕೊಳ್ಳುವದರಿಂದ ಉಂಟಾಗುವ ಅಪಾಯದ ಬಗ್ಗೆ ಮಾತನಾಡುತ್ತಾ ಈ ಸಲಹೆ ನೀಡಿತು. ಸಾಮಾಜಿಕ ಮಾಧ್ಯಮವನ್ನು ನಿಷೇಧಿಸುವದು ಉತ್ತಮ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿಗಳು, ಶಾಲೆಗೆ ಹೋಗುವ ಮಕ್ಕಳು ಸಾಮಾಜಿಕ ಜಾಲತಾಣವನ್ನು ಉಪಯೋಗಿಸುತ್ತಿದ್ದು, ಅವರಿಗೆ ಯಾವದು ಕೆಟ್ಟದ್ದು, ಯಾವದು ಒಳ್ಳೆಯದು ಅನ್ನೋದು ಗೊತ್ತಾಗಲ್ಲ. ಆ ವಯಸ್ಸಲ್ಲಿ ಮಕ್ಕಳಿಗೆ ಪ್ರಭುದ್ಧತೆ ಇರುತ್ತದೆಯೇ ಎಂದು ಪ್ರಶ್ನಿಸಿತು. ಬಳಕೆದಾರರ ವಯಸ್ಸು ಕನಿಷ್ಟ 18 ವರ್ಷ ವಯಸ್ಸಾಗಿರಬೇಕು, ಏಕೆಂದರೆ ಅದು ಅವರು ಮತ ಚಲಾಯಿಸುವ ವಯಸ್ಸು ಎಂದು ಹೇಳಿತು.

2021 ಮತ್ತು 2022 ರಲ್ಲಿ ಕೆಲವು ಟ್ವಿಟ್ ಗಳನ್ನು ಮತ್ತು ಖಾತೆಗಳನ್ನು ನಿರ್ಬಂಧಿಸಲು ಭಾರತ ಸರ್ಕಾರದ ಆದೇಶಗಳಿಗೆ ಸಂಬಂದಿಸಿದ ಪ್ರಕರಣದಲ್ಲಿ ಎಕ್ಸ್ ಕಾರ್ಪ್ ( ಟ್ವಿಟರ್ ) ಮಾಡಿದ ಮೇಲ್ಮನವಿಯ ವಿಚಾರಣೆಯ ಕೊನೆಯಲ್ಲಿ ಹೈಕೋರ್ಟ್ ಮೌಖಿಕವಾಗಿ ಹೇಳಿತು. ಕೆಲವು ಆನ್ ಲೈನ್ ಆಟಗಳನ್ನು ಪ್ರವೇಶಿಸುವ ಮೊದಲು ಬಳಕೆದಾರರು ಆಧಾರ ಮತ್ತು ಇತರ ಧಾಖಲೆಗಳನ್ನು ಹೊಂದಿರಬೇಕೆಂಬ ನಿಯಮ ವಿಧಿಸಿದೆ ಎಂದು ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ವಕೀಲರು ನ್ಯಾಯಾಲಯಕ್ಕೆ ತಿಳಿಸಿದಾಗ, ಅಂತಹ ಕ್ರಮಗಳನ್ನು ಸಾಮಾಜಿಕ ಮಾಧ್ಯಮಕ್ಕೂ ಏಕೆ ವಿಸ್ತರಿಸುತ್ತಿಲ್ಲ ಎಂದು ನ್ಯಾಯಾಲಯ ಕೇಳಿತು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾಗಿ ರುದ್ರೇಶ್ ಘಾಳಿ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾಗಿ, ರುದ್ರೇಶ ಘಾಳಿಯವರನ್ನು ನೇಮಕ ಮಾಡಲಾಗಿದೆ.  ಪಾಲಿಕೆ ಆಯುಕ್ತರಾಗಿದ್ದ ಡಾ. ಈಶ್ವರ ಉಳ್ಳಾಗಡ್ಡಿಯವರನ್ನು ಬೆಳಗಾವಿ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಹುದ್ದೆಗೆ

Live Cricket

error: Content is protected !!