ಹುಬ್ಬಳ್ಳಿಯಲ್ಲಿಂದು ಗಣೇಶ ವಿಸರ್ಜನೆ ಸಂದರ್ಭದಲ್ಲಿ ಕೋಮು ಸೌಹಾರ್ಧ ಕೆಡಿಸುವ ಹೇಳಿಕೆ ಕೊಟ್ಟಿದ್ದ ಪ್ರಮೋದ ಮುತಾಲಿಕ್ ಮೇಲೆ ಕೇಸ್ ಧಾಖಲಾಗಿದೆ. ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ, ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ, ಹಿಂದೂ ಸಮಾಜ ಕೆಣಕಿದರೆ, ಮಸೀದಿಯಲ್ಲಿಯೂ ಗಣೇಶ ಪ್ರತಿಷ್ಟಾಪನೆ ಮಾಡುವಾದಾಗಿ ಹೇಳಿಕೆ ನೀಡಿದ್ದರು.
ಪ್ರಮೋದ ಮುತಾಲಿಕ ಹೇಳಿಕೆ ಇಂದ ಕೋಮು ಸಾಮರಸ್ಯಕ್ಕೆ ಧಕ್ಕೆ ಬಂದಿದೆ ಎಂದು ಆರೋಪಿಸಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮುತಾಲಿಕ್ ಮೇಲೆ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ಧಾಖಲಿಸಿದೆ. ಮುತಾಲಿಕ್ ಮೇಲೆ 153(a) ಮತ್ತು 295 (a) ಕಲಂ ಅನ್ವಯ ಕೇಸ್ ಧಾಖಲಾಗಿದೆ.