ಗಡಿನಾಡು ಬೆಳಗಾವಿ ತರಕಾರಿ ಬೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಬ್ಬು ಬೆಳೆಯನ್ನುಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಬೆಳಗಾವಿ ಜಿಲ್ಲೆಯ ರೈತರು ಸಮ ಪ್ರಮಾಣದಲ್ಲಿ ವಿವಿಧ ತರಕಾರಿಯನ್ನು ಬೆಳೆಯುತ್ತಾರೆ. ಪ್ರತಿ ದಿನ ಗೋವಾ ರಾಜ್ಯಕ್ಕೆ 40 ರಿಂದ 50 ಟ್ರಕ್ ನಷ್ಟು ತರಕಾರಿ ಗೋವಾ ರಾಜ್ಯಕ್ಕೆ ಸರಬರಾಜು ಆಗುತ್ತದೆ. ಪಕ್ಕದ ಮಹಾರಾಷ್ಟ್ರದಲ್ಲಿಯೂ ಬೆಳಗಾವಿ ಜಿಲ್ಲೆಯ ತರಕಾರಿಗೆ ಹೆಚ್ಚು ಬೇಡಿಕೆ ಇದೆ. ಬೆಳಗಾವಿ ಜಿಲ್ಲೆಯಿಂದ ಮಹಾರಾಷ್ಟ್ರ ರಾಜ್ಯಕ್ಕೂ ಪ್ರತಿ ದಿನ ದೊಡ್ಡ ಪ್ರಮಾಣದಲ್ಲಿ ತರಕಾರಿ ಹೋಗುತ್ತದೆ. ಉತ್ತರ ಕರ್ನಾಟಕದ ನಾಲ್ಕೈದೂ ಜಿಲ್ಲೆಗಳಲ್ಲಿ ಇರುವ ರಿಲಾಯನ್ಸ್ ಮಳಿಗೆಗಳಿಗೆ ಬೆಳಗಾವಿ ಇಂದಲೇ ತರಕಾರಿ ಹೋಗುತ್ತದೆ.
ಬೆಳಗಾವಿಯ ಸುವರ್ಣ ಸೌಧದ ಪಕ್ಕದಲ್ಲಿ ರಿಲಾಯನ್ಸ್ ಕಂಪನಿ ತರಕಾರಿಯ ದೊಡ್ಡ ಗೋಡೌನ್ ತೆರೆದಿದ್ದು, ಇಲ್ಲಿ ರೈತರಿಂದ ನೇರವಾಗಿ ತರಕಾರಿ ಖರೀದಿ ಮಾಡುತ್ತದೆ. ಇದರಿಂದ ರೈತರಿಗೂ ಅನುಕೂಲವಾಗಿದ್ದು, ದಲ್ಲಾಳಿಗಳ ಕಾಟ ತಪ್ಪಿದೆ. ಗೋವಾ ರಾಜ್ಯದಲ್ಲಿ ಕೃಷಿ ಭೂಮಿ ಕಡಿಮೆ ಇರೋದರಿಂದ ಕರ್ನಾಟಕದ ತರಕಾರಿ ಮೇಲೆ ಆ ರಾಜ್ಯ ಅವಲಂಭಿತವಾಗಿದೆ. ಅಲ್ಲಿನ 1500 ಕ್ಕೂ ಹೆಚ್ಚು ಸಗಟು ತರಕಾರಿ ಮಳಿಗೆಗಳಲ್ಲಿ ಕರ್ನಾಟಕದ ತರಕಾರಿ ಮಾರಾಟವಾಗುತ್ತದೆ.
ಬೀನ್ಸ್, ಕ್ಯಾಬೀಜ, ಬಿಟ್ ರೂಟ್, ಫ್ಲಾವರ, ಹಸಿಮೆಣಸಿನಕಾಯಿ, ನುಗ್ಗಿಕಾಯಿ, ಕ್ಯಾಪ್ಸಿಕಮ್ ( ದೊಣ್ಣ ಮೆಣಸಿನಕಾಯಿ ) ಸೇರಿದಂತೆ ನಾನಾ ನಮೂನೆಯ ತರಕಾರಿ ಬೆಳೆದು ಬೆಳಗಾವಿ ರೈತರು, ಆರ್ಥಿಕವಾಗಿ ಸದೃಢರಾಗಿದ್ದಾರೆ.