ಕೆಲ ಕಾರಣಗಳಿಂದ ಒಂದು ವಾರಗಳ ಕಾಲ ರದ್ದಾಗಿದ್ದ ಹುಬ್ಬಳ್ಳಿ ತಿರುಪತಿ ರೈಲು ಮತ್ತೆ ಪುನರಾರಂಭವಾಗಿದೆ. ರೈಲು ಸಂಖ್ಯೆ 07657 ತಿರುಪತಿ ಹುಬ್ಬಳ್ಳಿ ಡೇಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ನಿಗದಿತ ಸಮಯಕ್ಕೆ ಇಂದಿನಿಂದಲೇ ಪ್ರಯಾಣ ಆರಂಭಿಸಲಿದೆ. ಈ ರೈಲನ್ನು 22 ರಿಂದ 30-09-2023 ರ ವರೆಗೆ ರದ್ದುಪಡಿಸಲಾಗಿತ್ತು.
ರೈಲು ಸಂಖ್ಯೆ 07658 ಹುಬ್ಬಳ್ಳಿ ತಿರುಪತಿ ಡೇಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ಸಹ ನಿಗದಿತ ಸಮಯಕ್ಕೆ ಪ್ರಯಾಣ ಬೆಳೆಸಲಿದೆ. ಈ ರೈಲನ್ನು 23-09-2023 ರಿಂದ 01-10-2023 ರ ವರೆಗೆ ರದ್ದು ಪಡಿಸಲಾಗಿತ್ತು. ತಿರುಪತಿ ರೈಲು ರದ್ದಾಗಿದ್ದರಿಂದ ಪ್ರಯಾಣಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಫೈಲ್ಸ್ ರೈಲ್ವೇ ಅಧಿಕಾರಿಗಳ ಗಮನ ಸೆಳೆದಿತ್ತು