ರಾಜ್ಯ ರಾಜಕಾರಣದಲ್ಲಿ ಕುತೂಹಲ ಕೆರಳಿಸಿದ್ದ ಹುಬ್ಬಳ್ಳಿ ಸೆಂಟ್ರಲ್ ವಿಧಾನಸಭಾ ಚುನಾವಣೆಯಲ್ಲಿ, ಜಗದೀಶ ಶೆಟ್ಟರರನ್ನು ಸೋಲಿಸಲೇ ಬೇಕು ಎಂದು ಪಣ ತೊಟ್ಟಿದ್ದ ಬಿಜೆಪಿ ತನ್ನ ಹಠ ಸಾಧಿಸಿಯಾಗಿದೆ. ಅದೇ ಸಮಯಕ್ಕೆ ಜಗದೀಶ ಶೆಟ್ಟರ ಅವರನ್ನು ಸೋಲಿಸಲೇ ಬೇಕು ಎಂದು ಒಳಗೊಳಗೆ ಕೆಲಸ ಮಾಡಿದವರು ಕಾಂಗ್ರೇಸ್ಸಿಗರೇ ಅನ್ನೋ ಸತ್ಯ ಬಹಿರಂಗವಾಗತೊಡಗಿದೆ.
ಹೌದು ಸತ್ಯ ಬಹಿರಂಗವಾಗಿದೆ
ಸಜ್ಜನಿಕೆಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರರಿಗೆ ಸೋಲಿನ ರುಚಿ ತೋರಿಸಿದವರು ಕಾಂಗ್ರೇಸ್ಸಿಗರೇ ಅನ್ನೋ ಸತ್ಯ ಬಹಿರಂಗವಾಗುತ್ತಿದೆ. ಮೂರು ದಶಕಗಳ ಕಾಲ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ್ದ ಜಗದೀಶ ಶೆಟ್ಟರ ಅವರಿಗೆ ಟಿಕೇಟ್ ತಪ್ಪಿದ ಪರಿಣಾಮ ಶೆಟ್ಟರ ಅವರು ಕಾಂಗ್ರೇಸ್ ಪಕ್ಷದ ಸೇರಿದ್ದರು. ಕಾಂಗ್ರೇಸ ಪಕ್ಷ ಸೇರಿದ್ದ ಜಗದೀಶ ಶೆಟ್ಟರ ಅವರಿಗೆ ಕಾಂಗ್ರೇಸ್ ಹೈಕಮಾಂಡ, ಗೌರವಯುತವಾಗಿ ನಡೆಸಿಕೊಂಡಿದ್ದರ ಬಗ್ಗೆ ಎರಡು ಮಾತಿಲ್ಲ.
ಆದರೆ, ಜಗದೀಶ ಶೆಟ್ಟರ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರಕ್ಕೆ ಕೈ ಅಭ್ಯರ್ಥಿ ಘೋಷಣೆಯಾಗುತ್ತಿದ್ದಂತೆ ಕಾಂಗ್ರೇಸ್ ಪಾಳಯದಲ್ಲಿ ಹುರುಪು, ಹುಮ್ಮಸ್ಸು ಕಂಡು ಬಂದಿತ್ತು. ಕಾಂಗ್ರೇಸ್ ಪಕ್ಷಕ್ಕೆ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೇಸಗೆ ಮತ್ತಷ್ಟು ಶಕ್ತಿ ಬಂದಿತ್ತು. ಆದರೆ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೇಸ್ಸಿಗರಿಂದ ಒಳಗೊಳಗೇ ಶಕ್ತಿ ಕುಂದಿಸುವ ಕೆಲಸ ನಡೆಯಿತು ಅನ್ನೋ ಮಾತು ಸೆಂಟ್ರಲ್ ಕ್ಷೇತ್ರದ ಕಟ್ಟೆಯ ಮೇಲೆ ಕುಳಿತವರು ಮಾತನಾಡತೊಡಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪ್ರಲ್ಲಾದ ಜೋಶಿ ವಿರುದ್ದ ಜಗದೀಶ ಶೆಟ್ಟರ ಸ್ಪರ್ಧೆ ಮಾಡುತ್ತಾರೆ ಅನ್ನೋ ಚರ್ಚೆ ಬಂದಾಗ, ಕ್ಷೇತ್ರದ ಜನ, ಕಾಂಗ್ರೇಸ್ ನಾಯಕರು ಒಗ್ಗಟ್ಟು ಇಲ್ಲ. ಇದ್ದಿದ್ದರೆ ಶೆಟ್ಟರ ಸೋಲುತ್ತಿರಲಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಜಗದೀಶ ಶೆಟ್ಟರ ಅವರಿಗೆ ಮತ ಹಾಕದಂತೆ ನಮಗೆ ಕರೆ ಮಾಡಿದ್ದರು ಎಂದು ಆ ಕ್ಷೇತ್ರದ ಜನ ಒಬ್ಬೊಬ್ಬರಾಗಿ ಮಾತನಾಡಿಕೊಳ್ಳುತ್ತಿದ್ದಾರೆ. ಶೆಟ್ಟರ ಅವರನ್ನು ಸೋಲಿಸಲು ಯತ್ನಿಸಿದ್ದ ಕಾಂಗ್ರೆಸ್ಸಿನವರು ಯಾರಾರು ಅನ್ನೋದನ್ನ ” ಕರ್ನಾಟಕ ಫೈಲ್ಸ್ ” ಧಾಖಲೆ ಸಮೇತ ಬಿಚ್ಚಿಡಲಿದೆ.