ಕರ್ನಾಟಕ ಬಿಜೆಪಿಗೆ ಹೊಸ ಸಾರಥಿಯ ಘೋಷಣೆ ಸದ್ಯದಲ್ಲಿಯೇ ನಡೆಯಲಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಬಿ ಎಸ್ ಯಡಿಯೂರಪ್ಪನವರ ಸುಪುತ್ರ, ಶಿಕಾರಿಪುರ ಶಾಸಕ ಬಿ ವೈ ವಿಜಯೇಂದ್ರ ಹೆಸರು ಅಂತಿಮಗೊಂಡಿದೆ ಎನ್ನಲಾಗಿದೆ.
ಈಗಾಗಲೇ ಬಿಜೆಪಿ ಹೈಕಮಾಂಡ, ಮೇಘಾಲಯ, ಪುದುಚೇರಿ, ನಾಗಾಲ್ಯಾಂಡಗಳ ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆ ಮಾಡಿದೆ. ಲೋಕಸಭಾ ಚುನಾವಣೆಗೆ ಪಕ್ಷ ಸಂಘಟನೆ ಮಾಡಬೇಕಿದ್ದು, ಶೀಘ್ರದಲ್ಲಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲು ಬಿಜೆಪಿ ಹೈಕಮಾಂಡ ಯೋಚಿಸಿದೆ.
ಉತ್ತರ ಕರ್ನಾಟಕದಲ್ಲಿನ ಲಿಂಗಾಯತ ಸಮುದಾಯದ ಪ್ರಮುಖ ಮುಖಂಡರು ಒಬ್ಬೊಬ್ಬರಾಗಿ ಬಿಜೆಪಿ ಇಂದ ಹೊರ ಹೋಗುತ್ತಿದ್ದು, ಲಿಂಗಾಯತ ಸಮಾಜದ ಮೇಲೆ ಹಿಡಿತ ಹೊಂದಿರುವ ಬಿ ಎಸ್ ಯಡಿಯೂರಪ್ಪನವರ ಮಗನಿಗೆ ಪಕ್ಷದ ಜವಾಬ್ದಾರಿ ನೀಡಿದರೆ, ಮತ್ತೆ ಸಮಾಜವನ್ನು ಹಿಡಿದಿಟ್ಟಕೊಳ್ಳಬಹುದು ಎಂಬುದು ಹೈಕಮಾಂಡ ಲೆಕ್ಕಾಚಾರವಾಗಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಬಿ ವೈ ವಿಜಯೇಂದ್ರ ತಮ್ಮ ಫೇಸ್ ಬುಕ್ ಖಾತೆಯ ಮುಖಪುಟದಲ್ಲಿ ” ಇದು ಅಂತ್ಯವಲ್ಲ, ಆರಂಭ ” ಎಂಬ ಫೋಟೋ ಹಾಕಿದ್ದು, ರಾಜ್ಯ ಬಿಜೆಪಿಗೆ ಶೀಘ್ರ ಅಧ್ಯಕ್ಷ ಸ್ಥಾನ ಘೋಷಣೆಯಾಗಲಿದೆ ಎಂಬ ಸಂದೇಶ ರವಾನಿಸಿದ್ದಾರೆ.