ಕಾವೇರಿ ಹೋರಾಟ ತೀವ್ರ ಸ್ವರೂಪ ಪಡೆದಿದ್ದು, ಹೋರಾಟದಲ್ಲಿ ಭಾಗವಹಿಸದ ಚಿತ್ರ ನಟರ ಮೇಲೆ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ರುದ್ರಾವತಾರ ತಾಳಿದ್ದಾರೆ. ಕಾವೇರಿಗಾಗಿ ನಡೆದಿರುವ ಹೋರಾಟದಲ್ಲಿ ಭಾಗವಹಿಸುವಂತೆ ಅವರ ಮನೆಗೆ ಹೋಗಿ ಆಮಂತ್ರಿಸಬೇಕಾ ಎಂದು ಪ್ರಶ್ನಿಸಿದ್ದಾರೆ. ಯಾವ ನಟರು ಕಾವೇರಿ ಹೋರಾಟದಲ್ಲಿ ಭಾಗವಹಿಸುವದಿಲ್ಲವೋ, ಆ ನಟರ ಚಿತ್ರವನ್ನು ಬಹಿಸ್ಕರಿಸಬೇಕೆಂದು ಶಾಸಕ ಯತ್ನಾಳ ಕರೆ ನೀಡಿದ್ದಾರೆ. ಇದೇ ವೇಳೆ ಪ್ರಕಾಶ ರೈ ಕುರಿತು ಯತ್ನಾಳ ನಾಲಿಗೆ ಹರಿಬಿಟ್ಟಿದ್ದು, ಪ್ರಕಾಶ ರೈ ಹಂದಿ ಇದ್ದಂತೆ ಎಂದು ಹೇಳಿದ್ದಾರೆ.