ಮಾಜಿ ಕೇಂದ್ರ ಸಚಿವೆ ಹಾಗೂ ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರು ಇಂಟರ್‌ನ್ಯಾಶನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್‌ನೆಸ್ (ಇಸ್ಕಾನ್) ವಿರುದ್ಧ ದೊಡ್ಡ ಆರೋಪ ಮಾಡಿದ್ದಾರೆ, ಇದು ಭಾರತದ ಅತಿದೊಡ್ಡ ವಂಚಕ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಜನತಾ ದಳ (ಆರ್‌ಎಲ್‌ಡಿ) ರಾಷ್ಟ್ರೀಯ ಪ್ರಚಾರ ಉಸ್ತುವಾರಿ ಪ್ರಶಾಂತ್ ಕನೋಜಿಯಾ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಮೇನಕಾ ಈ ರೀತಿ ಆರೋಪ ಮಾಡಿದ್ದಾರೆ.
ಮೇನಕಾ ಗಾಂಧಿ, ಇಸ್ಕಾನ್ ಕುರಿತು ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದು, ವೈರಲ್ ಆಗಿದೆ.
ದನದ ಕೊಟ್ಟಿಗೆ ನಡೆಸಲು ಸರ್ಕಾರದಿಂದ ಇಸ್ಕಾನ್‌ಗೆ ಜಮೀನು ಮತ್ತು ಸವಲತ್ತು ಸಿಗುತ್ತದೆ, ಆದರೆ ಇಸ್ಕಾನ್ ಮೋಸ ಮಾಡುತ್ತಿದೆ ಎಂದು ಮೇನಕಾ ವಿಡಿಯೋದಲ್ಲಿ ಹೇಳಿದ್ದಾರೆ.
ಇತ್ತೀಚೆಗಷ್ಟೇ ಅನಂತಪುರದ ಗೋಶಾಲೆಗೆ ಹೋಗಿದ್ದೆ, ಅಲ್ಲಿ ಒಂದೇ ಒಂದು ಹಸುವೂ ಆರೋಗ್ಯಯುತವಾಗಿಲ್ಲ. ಬಹುತೇಕ ದನಕರುಗಳನ್ನು ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇಸ್ಕಾನ್ ತನ್ನ ಹಸುಗಳನ್ನು ಕಟುಕರಿಗೆ ಮಾರುತ್ತಿದೆ ಎಂದು ಬಿಜೆಪಿ ಸಂಸದೆ ಮೇನಕಾ ಹೇಳಿದ್ದು,. ಕೋಲಾಹಲ ಉಂಟು ಮಾಡಿದೆ.
ಬೀದಿ ಬೀದಿಗಳಲ್ಲಿ ಹರೇ ರಾಮ್-ಹರೇ ಕೃಷ್ಣ ಎಂದು ಹೇಳುತ್ತಾರೆ ಮತ್ತು ಹಾಲು-ಹಾಲು ಎಂದು ಕರೆಯುತ್ತಾರೆ, ಆದರೆ ಅವರು ಕಟುಕರಿಗೆ ಮಾರಾಟ ಮಾಡಿದಷ್ಟು ಯಾರೂ ಮಾರಾಟ ಮಾಡಿಲ್ಲ ಎಂದು ಮೇನಕಾ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.