ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ ಎಂದು ಹೇಳಿ, ಮುಸ್ಲಿಂ ನಾಯಕರು ಜೆಡಿಎಸ್ ತೊರೆಯುತ್ತಿರುವದರಿಂದ ಜೆಡಿಎಸ್ ಗೆ ಏನು ಪರಿಣಾಮ ಬೀರಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಮುಸ್ಲಿಂ ಸಮುದಾಯ ವಾಸ್ತವಿಕವಾಗಿ ಜೆಡಿಎಸ್ ಜೊತೆ ನಿಂತಿಲ್ಲ. ಮುಸ್ಲಿಂ ಸಮುದಾಯ ನಿಂತಿದ್ದರೆ, ಜೆಡಿಎಸ್ ಗೆ ಕೇವಲ 19 ಸೀಟು ಬರುತ್ತಿರಲಿಲ್ಲ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಬಳಿಕ ಜೆಡಿಎಸ್ ಮುಸ್ಲಿಂ ಸಮುದಾಯ ಜೆಡಿಎಸ್ ತೊರೆಯುವದರಿಂದ ಬಿಜೆಪಿ ಹಾಗೂ ಜೆಡಿಎಸ್ ಮೇಲೆ ಯಾವದೇ ಪರಿಣಾಮ ಬೀರಲ್ಲ ಎಂದಿದ್ದಾರೆ.
ಇನ್ನು ಬಿಜೆಪಿ ಬಿಟ್ಟು ಕೆಲ ಮಾಜಿ ಶಾಸಕರು ಕಾಂಗ್ರೇಸ್ ಕದ ತಟ್ಟುತ್ತಿದ್ದಾರೆ ಅನ್ನೋ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ರಾಮಣ್ಣ ಲಮಾಣಿ ಹಾಗೂ ರೇಣುಕಾಚಾರ್ಯ ಜೊತೆ ನಾನು ಮಾತನಾಡಿದ್ದೇನೆ ಎಂದಿರುವ ಅವರು, ಒಂದಿಬ್ಬರು ಹೋಗಿದ್ದಾರೆ. ಮತ್ಯಾರು ಹೋಗಲ್ಲ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.