Download Our App

Follow us

Search
Close this search box.
Home » ಕರ್ನಾಟಕ » ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಚಿನ್ನದ ಮಂಗಳಸೂತ್ರ ನುಂಗಿದ ಎಮ್ಮೆ. ಶಸ್ತ್ರ ಚಿಕಿತ್ಸೆ ಮೂಲಕ ಚಿನ್ನ ಹೊರಕ್ಕೆ. ವಿಡಿಯೋ ಇದೆ.

ಎಮ್ಮೆಯೊಂದು 2.5 ಲಕ್ಷ ಬೆಲೆಯ ಚಿನ್ನದ ಸರ ನುಂಗಿದ ಘಟನೆ ನಡೆದಿದೆ. ಚಿನ್ನದ ಸರದ ಸಲುವಾಗಿ ಮಾಲೀಕ, ಎಮ್ಮೆಯ ಹೊಟ್ಟೆಯನ್ನೇ ಸೀಳಿರುವ ಘಟನೆ ಮಹಾರಾಷ್ಟ್ರದ ಮಂಗ್ರುಲ್ಪಿರ್ ನಲ್ಲಿರುವ ಸರ್ಸಿ ಗ್ರಾಮದಲ್ಲಿ ನಡೆದಿದೆ.

ಮನೆಯಲ್ಲಿ ಸಾಕಿದ್ದ ಎಮ್ಮೆಗೆ ತರಕಾರಿ ಸಿಪ್ಪೆಯನ್ನು ಹಾಕುವಾಗ ಮಾಲಕಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವು ಆಕಸ್ಮಿಕವಾಗಿ ಕಳಚಿ ಬಿದ್ದಿದೆ. ಇದು ಸುಮಾರು 35 ಗ್ರಾಂನ 2.5 ಲಕ್ಷ ರೂ. ಮೌಲ್ಯದ ಚಿನ್ನದ ಸರವಾಗಿದ್ದು, ಅದನ್ನು ಎಮ್ಮೆ ಸಿಪ್ಪೆಯ ಜೊತೆಗೆ ನುಂಗಿಬಿಟ್ಟಿದೆ. ಇದು ಮಹಿಳೆಯ ಗಮನಕ್ಕೆ ಬಂದಿಲ್ಲ. ಸರ ಕಳೆದುಕೊಂಡ ಮಹಿಳೆ ಎಷ್ಟೇ ಹುಡುಕಾಡಿದರೂ ಸರ ಸಿಗದ ಹಿನ್ನೆಲೆಯಲ್ಲಿ ಗಂಡನಿಗೆ ತಿಳಿಸಿದ್ದಾರೆ. ಆಗ ಮನೆಯಲ್ಲಿ ಎಲ್ಲರೂ ಹುಡುಕಾಡಿದ್ದಾರೆ. ನಂತರ ಎಮ್ಮೆಗೆ ತರಕಾರಿ ಸಿಪ್ಪೆ ತಿನ್ನಿಸಿದ್ದು ನೆನಪಿಗೆ ಬಂದಿದೆ. ಎಮ್ಮೆಯೇ ಸರವನ್ನು ನುಂಗಿರಬೇಕು ಎಂದು ತಿಳಿದು ವೈದ್ಯರ ಬಳಿ ಎಮ್ಮೆಯನ್ನು ಕರೆದೊಯ್ದಿದ್ದಾರೆ. ಆದರೆ, ಸ್ಥಳೀಯವಾಗಿ ಎಮ್ಮೆಯ ಹೊಟ್ಟೆಯಲ್ಲಿರುವ ಚಿನ್ನದ ಸರ ಹೊರಗೆ ತೆಗೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ನಂತರ ಎಮ್ಮೆಯನ್ನು ಪಟ್ಟಣ ಪ್ರದೇಶ ಮಾವಾಶಿಮ್‌ಗೆ ಕೊಂಡೊಯ್ಯಲು ಎಮ್ಮೆ ಮಾಲೀಕ ಭೋಯರ್‌ಗೆ ಹೇಳಿದ್ದಾರೆ. ಅಲ್ಲಿ ಅನುಭವಿ ಪಶುವೈದ್ಯರು ಎಮ್ಮೆಯ ಹೊಟ್ಟೆಯನ್ನು ಪರೀಕ್ಷಿಸಿದ್ದಾರೆ. ಮಾವಾಶಿಮ್‌ನ ಹಿರಿಯ ಪಶು ವೈದ್ಯಾಧಿಕಾರಿ, ಲೋಹ ಶೋಧಕ ಯಂತ್ರವನ್ನು ಬಳಸಿ ಚಿನ್ನದ ಸರ ಎಮ್ಮೆಯ ಹೊಟ್ಟೆಯಲ್ಲಿರುವುದನ್ನು ತಿಳಿದುಕೊಂಡಿದ್ದಾರೆ. ಎಮ್ಮೆಯಿಂದ ಚಿನ್ನದ ಸರವನ್ನು ಹೊರ ತೆಗೆಯುವುದಕ್ಕೆ ಪ್ರಯತ್ನ ಮಾಡಿದ್ದಾರೆ.

 

ಶತಪ್ರಯತ್ನ ಪಟ್ಟರೂ ಎಮ್ಮೆಯ ಹೊಟ್ಟೆಯಿಂದ ಚಿನ್ನದ ಸರ ತೆಗೆಯಲಾಗದಿದ್ದಾಗ ಎಮ್ಮೆಗೆ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಹೇಳಿದ್ದಾರೆ. ಚಿನ್ನದ ಸರ ಹೊರಗೆ ತೆಗೆಯಬೇಕು ಎಂದು ವೈದ್ಯರು ಹೇಳಿದರು. ಇದಕ್ಕೆ ಮಾಲೀಕರು ಕೂಡ ಅನುಮತಿಯ ಮೇರೆಗೆ ಎಮ್ಮೆಯ ಹೊಟ್ಟೆಗೆ ಶಸ್ತ್ರಚಿಕಿತ್ಸೆ ಮಾಡಿ ಚಿನ್ನದ ಸರವನ್ನು ಹೊರ ತೆಗೆದಿದ್ದಾರೆ. ಸದ್ಯ ಎಮ್ಮೆ ಆರೋಗ್ಯವಾಗಿದೆ ಹಾಗೂ ಚಿನ್ನದ ಸರ ಮರಳಿ ಸಿಕ್ಕಿದ್ದು ಮಾಲೀಕನಿಗೆ ಸಂತಸ ಉಂಟಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ

Live Cricket

error: Content is protected !!