ಗಟ್ಟಿ ನಿರ್ಧಾರ, ಅಚಲ ವಿಶ್ವಾಸ, ಕೆಲಸದ ಮೇಲೆ ಶೃದ್ದೆ ಇದ್ದರೆ ಸಾಕು ಎಂತಹ ಸವಾಲುಗಳನ್ನಾದರು ಮೆಟ್ಟಿ ನಿಲ್ಲಬಹುದು. ಇದಕ್ಕೆ ಜೀವಂತ ಸಾಕ್ಷಿ ವಿವೇಕ ರಾಮಸ್ವಾಮಿ. ಭಾರತೀಯ ಮೂಲದ ವಿವೇಕ ರಾಮಸ್ವಾಮಿ, ಅಮೇರಿಕದ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಬಯೋಟೆಕ್ ಉದ್ಯಮಿ ವಿವೇಕ್ ರಾಮಸ್ವಾಮಿ ಅವರ ಅಧ್ಯಕ್ಷೀಯ ಪ್ರಚಾರವು ನವೆಂಬರ್ 8 ರಂದು ಮಿಯಾಮಿಯಲ್ಲಿ ನಡೆಯಲಿರುವ ಮೂರನೇ ರಿಪಬ್ಲಿಕನ್ ಪ್ರಾಥಮಿಕ ಚರ್ಚೆಯ ನಿಯಮಗಳನ್ನು ಬದಲಾಯಿಸಲು ರಿಪಬ್ಲಿಕನ್ ರಾಷ್ಟ್ರೀಯ ಸಮಿತಿ ಕೋರಿದೆ. ನವೆಂಬರ್ 2024 ರ ಚುನಾವಣೆಯಲ್ಲಿ ಸ್ಪರ್ಧಿಸಲು ವಿವೇಕ ರಾಮಸ್ವಾಮಿ ಸಿದ್ಧತೆ ಮಾಡಿಕೊಂಡು ಪ್ರಚಾರ ಕಾರ್ಯಕ್ಕೆ ಧುಮುಕಿದ್ದಾರೆ. TRUTH ಎಂಬ ಘೋಷ ವಾಕ್ಯ ಇಟ್ಟುಕೊಂಡು ವಿವೇಕ ಭರ್ಜರಿ ಪ್ರಚಾರ ಕಾರ್ಯ ನಡೆಸಿದ್ದಾರೆ.