ಚಿಕ್ಕಬಳ್ಳಾಪುರದ ಚಿಂತಾಮಣಿಯ ಮುರುಗಮಲ್ಲ ಧಾರ್ಮಿಕ ಕೇಂದ್ರದಲ್ಲಿ ಕರ್ನಾಟಕ ಆರೋಗ್ಯ ಇಲಾಖೆ ವಿನೂತನ ಆರೋಗ್ಯ ಕಾರ್ಯಕ್ರಮ ಏರ್ಪಡಿಸಿದೆ. ಮುರುಗಮಲ್ಲ ದರ್ಗಾಕ್ಕೆ ದಿನನಿತ್ಯ ಸಾವಿರಾರು ಜನ ದೇವರ ದರ್ಶನಕ್ಕೆ ಬರುತ್ತಾರೆ. ಅಲ್ಲಿ ಬಂದವರು ಕಾಯಿಲೆ ವಾಸಿಯಾಗಲಿ ಎಂದು ಪ್ರಾರ್ಥಿಸುತ್ತಾರೆ. ಅಲ್ಲಿಗೆ ಬಂದ ಭಕ್ತರಿಗೆ ಆರೋಗ್ಯ ಇಲಾಖೆ ಆರೋಗ್ಯ ಸೇವೆ ಆರಂಭಿಸಿದೆ.
ಮುರುಗಮಲ್ಲ ದರ್ಗಾಕ್ಕೆ ಬಂದವರ ಪೈಕಿ 74 ಜನರ ಆರೋಗ್ಯ ತಪಾಸಣೆ ಮಾಡಲಾಗಿದ್ದು, 12 ಜನ ಮಾನಸಿಕ ಕಾಯಿಲೆ, 27 ಜನ ಖಿನ್ನತೆ, 7 ಜನ ಬೌದ್ಧಿಕ ಅಸಮರ್ಥತೆ, 22 ಜನ ಮೂರ್ಛೆರೋಗ ಸೇರಿದಂತೆ 6 ಜನ ಮಧ್ಯಪಾನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಿದೆ. ದುವಾ ಜೊತೆಗೆ ದವಾ ಸಹ ಕೆಲಸ ಮಾಡುತ್ತದೆ ಎನ್ನುವ ಘೋಷ ವಾಕ್ಯದೊಂದಿಗೆ ಆರೋಗ್ಯ ಇಲಾಖೆ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ.