Download Our App

Follow us

Home » ರಾಜಕೀಯ » ನಾನು ಕಾಂಗ್ರೆಸ್ ಶಾಸಕಿ ಅಲ್ಲ: ಲತಾ ಮಲ್ಲಿಕಾರ್ಜುನ. ಹರಪನಹಳ್ಳಿ ಶಾಸಕಿ, ದಿ.ಎಂ.ಪಿ.ಪ್ರಕಾಶ್ ಪುತ್ರಿ ಲತಾ ಮಲ್ಲಿಕಾರ್ಜುನ ಸ್ಫೋಟಕ ಹೇಳಿಕೆ.

ನಾನು ಕಾಂಗ್ರೆಸ್ ಶಾಸಕಿ ಅಲ್ಲ: ಲತಾ ಮಲ್ಲಿಕಾರ್ಜುನ. ಹರಪನಹಳ್ಳಿ ಶಾಸಕಿ, ದಿ.ಎಂ.ಪಿ.ಪ್ರಕಾಶ್ ಪುತ್ರಿ ಲತಾ ಮಲ್ಲಿಕಾರ್ಜುನ ಸ್ಫೋಟಕ ಹೇಳಿಕೆ.

ನಾನು ಕಾಂಗ್ರೆಸ್ ಶಾಸಕಿಯಲ್ಲ, ಸರ್ಕಾರದ ಪ್ರತಿನಿಧಿ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸದಸ್ಯತ್ವ ಪಡೆದಿಲ್ಲ ಎಂದು ವಿಜಯನಗರ ಜಿಲ್ಲೆಯ ಹರಪನಹಳ್ಳಿ ಕ್ಷೇತ್ರದ ಶಾಸಕಿ, ಮಾಜಿ ಉಪಮುಖ್ಯಮಂತ್ರಿ ದಿ.ಎಂ.ಪಿ.ಪ್ರಕಾಶ ಪುತ್ರಿ ಶ್ರೀಮತಿ ಲತಾ ಮಲ್ಲಿಕಾರ್ಜುನ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಹರಪನಹಳ್ಳಿ ಕ್ಷೇತ್ರದ ನಿಟ್ಟೂರು ಗ್ರಾಮದಲ್ಲಿ ಕುಡಿಯುನ ನೀರಿನ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿ.ಜೆ.ಪಿ ಸಂಸದ ಜಿ.ಎಂ.ಸಿದ್ದೇಶ್ವರ ಜೊತೆ ವೇದಿಕೆ ಹಂಚಿಕೊಂಡಿದ್ದ ಶಾಸಕಿ ಲತಾ ಮಲ್ಲಿಕಾರ್ಜುನ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ಸಿನಲ್ಲಿ ಲಿಂಗಾಯತರಿಗೆ ಸೂಕ್ತ ಸ್ಥಾನವಿಲ್ಲ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆ ಬೆನ್ನಲ್ಲೇ, ಶಾಸಕಿ ಲತಾ ಮಲ್ಲಿಕಾರ್ಜುನ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಮುಜುಗುರ ಉಂಟಾಗಿದೆ.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೇಟ್ ವಂಚಿತರಾಗಿ ಪಕ್ಷೇತರವಾಗಿ ಗೆದ್ದಿರುವ ಲತಾ ಮಲ್ಲಿಕಾರ್ಜುನ, ಸರ್ಕಾರ ರಚನೆಯಾಗುವ ಸಂಧರ್ಭದಲ್ಲಿ ಬೇಷರತ್ತಾಗಿ ಕಾಂಗ್ರೆಸ್ ಸೇರಿ ವಿಪ್ ಕೂಡ ಪಡೆದು ಮತ ಚಲಾಯಿಸಿದ್ದರು.

ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಪುತ್ರಿ ಅನ್ನುವ ಕಾರಣಕ್ಕೆ ಮುಖ್ಯಮಂತ್ರಿ ಸಿಧ್ದರಾಮಯ್ಯ ಹಾಗೂ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಶಾಸಕಿ ಲತಾ ಮಲ್ಲಿಕಾರ್ಜುನರನ್ನು ಅತ್ಯಂತ ವಿಶ್ವಾಸದಿಂದ ನಡೆಸಿಕೊಳ್ಳುತ್ತಿದ್ದರು.

ಲತಾ ಮಲ್ಲಿಕಾರ್ಜುನ ನಿನ್ನೆ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಜೊತೆಗೆ ವೇದಿಕೆ ಹಂಚಿಕೊಂಡಿದ್ದಾಗಲೇ ತಾವು ಕಾಂಗ್ರೆಸ್ ಶಾಸಕಿ ಅಲ್ಲ ಅನ್ನುವ ಹೇಳಿಕೆ ನೀಡಿ ತಮ್ಮ ಹೇಳಿಕೆಗೆ ಮಹತ್ವ ದೊರಕುವಂತೆ ಮಾಡಿದ್ದಾರೆ. ಇದರಿಂದಾಗಿ ಪಕ್ಷಕ್ಕೆ ಹಾಗೂ ಕ್ಷೇತ್ರದ ಕಾರ್ಯಕರ್ತರಲ್ಲಿ ಮುಜುಗುರ ಉಂಟಾಗುವಂತೆ ಮಾಡಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ ಜಿಲ್ಲೆಯ ರಾಜಕಾರಣಕ್ಕೆ ಭವಿಷ್ಯದ ಯುವ ನಾಯಕರ ಎಂಟ್ರಿ

ರಾಜ್ಯದ ಎರಡನೇ ರಾಜಕೀಯ ಶಕ್ತಿ ಕೇಂದ್ರ ಎನಿಸಿರುವ ಧಾರವಾಡ ಜಿಲ್ಲೆ, ಅನೇಕ ಘಟಾನುಘಟಿ ರಾಜಕಾರಣಿಗಳನ್ನು ರಾಜ್ಯಕ್ಕೆ ಪರಿಚಯಿಸಿದೆ.  ಮೂರು ಜನ ಮುಖ್ಯಮಂತ್ರಿಗಳನ್ನು ಕಂಡ ಧಾರವಾಡ ಜಿಲ್ಲೆ ರಾಜ್ಯ

Live Cricket

error: Content is protected !!