ಸುಸಂಸ್ಕೃತ ನಗರಿ ಧಾರವಾಡ ಮೊದಲಿನಂತೆ ಉಳಿದಿಲ್ಲ. ಬೀದಿ ರಂಪಾಟಗಳು, ಹೊಡೆದಾಟಗಳು ಸರ್ವೇ ಸಾಮಾನ್ಯವಾಗಿ ನಡೆಯುತ್ತಿವೆ. ಧಾರವಾಡದಲ್ಲಿ ಪುಡಿ ರೌಡಿಗಳ ಹಾವಳಿ ಮೀತಿ ಮೀರಿದೆ.
ಧಾರವಾಡದ ಜಕಣಿ ಭಾವಿಯ ಹತ್ತಿರ ಈಗಷ್ಟೆ ಹೊಡೆದಾಟ ನಡೆದಿದೆ. ಯುವಕನೋರ್ವನನ್ನು ಹತ್ತು ಜನ ಹೊಡೆಯುವ ದೃಶ್ಯ ವೈರಲ್ ಆಗಿದೆ. ಹತ್ತಿರದಲ್ಲಿಯೇ ಧಾರವಾಡ ಶಹರ ಪೊಲೀಸ್ ಠಾಣೆ ಇದ್ದರು, ಯಾರ ಭಯವಿಲ್ಲದೆ ಪುಡಿ ರೌಡಿಗಳು ಹೊಡೆದಾಡಿಕೊಂಡಿದ್ದಾರೆ. ಪೊಲೀಸ್ ಇಲಾಖೆ, ನಗರದ ನೆಮ್ಮದಿ ಉಳಿಸಬೇಕಾಗಿದೆ.