ಲಿಂಗಾಯತರ ಕಡೆಗಣನೆ ವಿಚಾರಕ್ಕೆ ಸಂಬಂಧಿಸಿದಂತೆ ದಾವಣಗೆರೆ ಶಾಸಕ ಶಾಮನೂರ ಶಿವಶಂಕರಪ್ಪ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಶಾಮನೂರು ಶಿವಶಂಕರಪ್ಪನವರಿಗೆ ತಾವು ಯಾರಿಂದ ಮತ ಪಡೆದು ಆಯ್ಕೆಯಾಗಿದ್ದೀರಿ ಎಂದು ಪ್ರಶ್ನಿಸಲಾಗಿದೆ.
ಸಾಮಾಜಿಕ ನ್ಯಾಯ ಸಂಘರ್ಷ ಸಮಿತಿ ಎಂಬ ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಜಾತಿವಾರು ಮತಗಳ ವಿವರ ಮತ್ತು ಶಿವಶಂಕರರಪ್ಪನವರು ಮತ ಪಡೆದ ವಿವರ ಬರೆಯಲಾಗಿದೆ.
ದಾವಣಗೆರೆ ದಕ್ಷಿಣ ಅಂದಾಜು ಜಾತಿವಾರು ಮತಗಳು
ಡಾವಣಗೆರೆ ದಕ್ಷಿಣದಲ್ಲಿ ಕೇವಲ 30 ಸಾವಿರದಷ್ಟು ಲಿಂಗಾಯತ ಮತಗಳು ಇವೆ. ಆದರೆ, ನೀವು 84 ಸಾವಿರದಾ 298 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಹಾಗಾದರೆ 54 ಸಾವಿರದಾ 298 ಮತಗಳು ಯಾವ ಜಾತಿಯಿಂದ ಬಂದಿದ್ದಾವೆ ಅನ್ನೋದನ್ನ ತಿಳಿಸಬೇಕು ಎಂದು ಶಾಮನೂರು ಧಣಿಗೆ ಸವಾಲು ಹಾಕಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಎಲ್ಲಾ ವರ್ಗದ ಮತ ಬೇಕು. ಗೆದ್ದ ಮೇಲೆ ಲಿಂಗಾಯತರು ಅಷ್ಟೇ ಸಾಕಾ? ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಲಾಗುತ್ತಿದೆ ಶಾಮನೂರು ಅಸಮಾಧಾನ ವ್ಯಕ್ತಪಡಿಸಿದ್ದರು. ಆಯಕಟ್ಟಿನ ಸ್ಥಳಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿದ್ದರು. i
