ನಿನ್ನೇ ನಡೆದ ಅಣ್ಣಿಗೇರಿ ಪುರಸಭೆ. ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಸದಸ್ಯರ ಬೆಂಬಲದಿಂದ ಅಧ್ಯಕ್ಷೆಯಾದ ಮೆಹಬೂಬಿ ನವಲಗುಂದ ಇವರಿಗೆ ಹುಬ್ಬಳ್ಳಿಯಲ್ಲಿಂದು ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಸನ್ಮಾನಿಸಿದ್ದು, ಧಾರವಾಡ ಜಿಲ್ಲೆಯ ರಾಜಕಾರಣದಲ್ಲಿ ದೊಡ್ಡ ಸುದ್ದಿ ಮಾಡಿದೆ. ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿಯವರ ಸಮ್ಮುಖದಲ್ಲಿಯೇ ಬಿಜೆಪಿಯ ಐವರು ಪುರಸಭೆ ಸದಸ್ಯರು, ಕಾಂಗ್ರೇಸ್ ನಿಂದ ಆಯ್ಕೆಯಾದ ಸದಸ್ಯೆ ಮೆಹಬೂಬಿ ನವಲಗುಂದ ಪರ ಮತ ಚಲಾಯಿಸಿ, ಮೆಹಬೂಬಿಯನ್ನು ಅಧ್ಯಕ್ಷೆಯನ್ನಾಗಿ ಮಾಡಿದರು. ಕಾಂಗ್ರೇಸ್, ಅಧ್ಯಕ್ಷ ಸ್ಥಾನಕ್ಕೆ ತನ್ನ ಅಧಿಕೃತ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಮುಖಭಂಗ ಅನುಭವಿಸಿದರೆ, ಬಿಜೆಪಿ ಪರಿಸ್ಥಿತಿಯ ಲಾಭ ಪಡೆಯಿತು.
ಅಣ್ಣಿಗೇರಿ ಪುರಸಭೆಯಲ್ಲಿ ಸರಳ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯಬೇಕಿದ್ದ ಕಾಂಗ್ರೇಸ್, ವಿಫಲವಾಗಿದ್ದು, ಕಾಂಗ್ರೇಸ್ ಪುರಸಭೆ ಸದಸ್ಯರ ಕಿತ್ತಾಟದಿಂದ ಪರಿಸ್ಥಿತಿಯ ಲಾಭ ಪಡೆದ ಬಿಜೆಪಿ ಕಾಂಗ್ರೇಸ್ ಗೆ ಖೇಡ್ಡಾ ತೋಡಿತು. ಪರಿಣಾಮ ವಿಜಯೋತ್ಸವದ ಮೆರವಣಿಗೆಯಲ್ಲಿ ಕಾಂಗ್ರೇಸ್ ಬಾವುಟದ ಜೊತೆ ಬಿಜೆಪಿ ಭಾವುಟವೂ ಒಟ್ಟಿಗೆ ಹಾರಾಡಿದವು.
ನವಲಗುಂದ ವಿಧಾನಸಭಾ ಮತಕ್ಷೇತ್ರದ ಜನಪ್ರಿಯ ಶಾಸಕ ಎನ್ ಎಚ್ ಕೋನರೆಡ್ಡಿಯವರಿಗೆ ತವರಿನಲ್ಲಿಯೇ ಸ್ವಲ್ಪಮಟ್ಟಿನ ಹಿನ್ನೇಡೆಯಾದ ಬೆನ್ನಲ್ಲೆ, ಇಂದು ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಹಿಜಾಬ್ ಧರಿಸಿ ಬಂದ ನೂತನ ಅಧ್ಯಕ್ಷೆ ಮೆಹಬೂಬಿಯವರಿಗೆ ಸನ್ಮಾನಿಸಿದ್ದು, ಹಿಜಾಬ್ ಬೇರೆ, ರಾಜಕಾರಣ ಬೇರೆ ಅನ್ನುವಂತಿತ್ತು.