ಉತ್ತರ ಕನ್ನಡದ ಕುಮಟಾ ಬಳಿ ಇರುವ ರೆಸಾರ್ಟ್ ನಲ್ಲಿ ವೈಶ್ಯಾವಾಟಿಕೆ ನಡೆಯುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿದ್ದಾರೆ. ಕುಮಟಾ ಬಳಿ ಇರುವ ನೇಸರ ರೆಸಾರ್ಟ್ ನಲ್ಲಿ ವೈಶ್ಯಾವಾಟಿಕೆ ನಡೆಯುವದನ್ನು ತಿಳಿದ ಪೊಲೀಸರು ದಾಳಿ ಮಾಡಿದ್ದಾರೆ. ದತ್ತು ಪಟಗಾರ ಅವರಿಗೆ ಸೇರಿದ್ದ ನೇಸರ ರೆಸಾರ್ಟ್ ನಲ್ಲಿ ಈ ಘಟನೆ ನಡೆದಿದೆ. ಕೋಲ್ಕತ್ತಾ ಹಾಗೂ ಬೆಂಗಳೂರು ಮೂಲದ 6 ಜನ ಸಂತ್ರಸ್ತ ಯುವತಿಯರ ರಕ್ಷಣೆ ಮಾಡಿರುವ ಪೊಲೀಸರು ಪ್ರಕರಣ ಧಾಖಲಿಸಿಕೊಂಡಿದ್ದಾರೆ.
ಭಟ್ಕಳ ಡಿವೈಎಸ್ಪಿ ಶ್ರೀಕಾಂತ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ಹಲವು ದಿನಗಳಿಂದ ಇಲ್ಲಿ ವೈಶ್ಯಾವಾಟಿಕೆ ನಡೆಯುತ್ತಿತ್ತು ಎನ್ನಲಾಗಿದೆ.
ವೈಶ್ಯಾವಾಟಿಕೆಯಲ್ಲಿ ತೊಡಗಿದ್ದ ಹತ್ತಕ್ಕೂ ಯುವಕರನ್ನು ಬಂಧಿಸಲಾಗಿದೆ.