ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ನಿರಂತರ ಟ್ವಿಟ್ ವಾರ ಮಾಡುತ್ತಿದೆ. ಗುತ್ತಿಗೆದಾರನ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಾಗಿನಿಂದ ಒಂದೆ ಸಮನೆ ಟ್ವಿಟ್ ಸಮರ ಸಾರಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೇಸ್ ಸಹ ಬಿಜೆಪಿ ವಿರುದ್ಧ ಸಮರ ಸಾರಿದೆ. ಬಿಜೆಪಿ, ಕರ್ನಾಟಕಕ್ಕೆ ಕತ್ತಲ ಭಾಗ್ಯದಿಂದ ಹಿಡಿದು, ಕಮಿಷನ್ ಸರ್ಕಾರ ಎಂದು ಆರೋಪ ಮಾಡುತ್ತಿದೆ. ಮತ್ತೊಂದೆಡೆ ಕಾಂಗ್ರೇಸ್ ಸಹ ಬಿಜೆಪಿಗೆ ಟಾಂಗ ನೀಡುತ್ತಿದ್ದು, ಸೋಲಿನ ಹತಾಸೆ, ಶೂನ್ಯ ನಾಯಕತ್ವ, ದೃಷ್ಟಿ ದೋಷ ಎಂದು ಆರೋಪಿಸುತ್ತಾ ಬಿಜೆಪಿ ಕಾಲೆಳೆಯುತ್ತಿದೆ.
