ಹೈದ್ರಾಬಾದನಲ್ಲಿರುವ ಪ್ರತಿಷ್ಟಿತ ಕೈಗಾರಿಕೆಯೊಂದನ್ನು ಬೆಂಗಳೂರಿಗೆ ಸ್ಥಳಾಂತರಿಸುವಂತೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಹೆಸರಲ್ಲಿ ಬರೆದಿರುವ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ನಕಲಿ ಪತ್ರವಾಗಿದ್ದು, ಈ ಸಂಬಂದ ಡಿ ಕೆ ಶಿವಕುಮಾರ ಅವರು ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ಧಾಖಲಿಸಿದ್ದಾರೆ.
ಮೂಲಗಳ ಪ್ರಕಾರ, ಐಪೋನ್ ತಯಾರಕ ಆಪಲ್, ತನ್ನ ವೈರ್ ಲೆಸ್ ಇಯರ್ ಬಡ್ಸ್ ಏರ್ ಪಾಡ್ ಗಳನ್ನು ತಯಾರಿಸಲಿದ್ದು, 2024 ರ ಡಿಸೆಂಬರ್ ನಲ್ಲಿ ಉತ್ಪಾದನೆ ಆರಂಭಿಸಲಿದೆ. ಕಂಪನಿ ಇದಕ್ಕಾಗಿ 400 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ ಎನ್ನಲಾಗಿದೆ.
ಪಕ್ಕದ ತೆಲಂಗಾಣದಲ್ಲಿ ವಿಧಾನ ಸಭಾ ಚುನಾವಣೆಗಳು ನಡೆದಿದ್ದು, ಬಿ ಆರ್ ಎಸ್ ಹಾಗೂ ಕಾಂಗ್ರೇಸ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ನಕಲಿ ಪತ್ರ ಹರಿಬಿಟ್ಟು, ಕಾಂಗ್ರೇಸ್ ಮೇಲೆ ಗೂಬೆ ಕೂರಿಸುವ ಶಂಕೆ ವ್ಯಕ್ತವಾಗಿದೆ. ನಕಲಿ ಪತ್ರದ ಜಾಲವನ್ನು ಕಂಡು ಹಿಡಿಯಲು ಮತ್ತು ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಡಿ ಕೆ ಶಿವಕುಮಾರ ದೂರು ಧಾಖಲಿಸಿದ್ದಾರೆ.