ದೇಶದ ಗಮನ ಸೆಳೆದಿರುವ ದೆಹಲಿ ವಿಧಾನಸಭೆಯ ಚುನಾವಣೆಗೆ ಮತದಾನ ಆರಂಭಗೊಂಡಿದೆ.
70 ಕ್ಷೇತ್ರಗಳಿಗೆ ನಡೆದ ಚುನಾವಣೆ ಜಿದ್ದಾಜಿದ್ದಿನಿಂದ ಕೂಡಿದೆ. ಒಟ್ಟು ಒಂದು ಕೋಟಿ 56 ಲಕ್ಷ ಜನ ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಬೆಳಿಗ್ಗೆಯಿಂದಲೇ ಮತದಾನ ಆರಂಭಗೊಂಡಿದೆ.
ದೆಹಲಿಯಲ್ಲಿ 13, 776 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 3000 ಮತಗಟ್ಟೆಗಳನ್ನು ಅತೀ ಸೂಕ್ಶ್ಮ ಮತಗಟ್ಟೆಗಳೆಂದು ಘೋಷಿಸಲಾಗಿದೆ. ಅಲ್ಲಿ ಬಿಗಿ ಭದ್ರತೆ ಮಾಡಲಾಗಿದೆ.
ಎರಡು ಬಾರಿ ಅಧಿಕಾರದ ಗದ್ದುಗೆ ಏರಿರುವ ಆಮ್ ಆದ್ಮಿ ಪಕ್ಷ, ಮತ್ತೆ ಪೈಪೋಟಿ ನೀಡಿದೆ. ಮೇಲ್ನೋಟಕ್ಕೆ ಕಾಂಗ್ರೇಸ್, ಬಿಜೆಪಿ ಹಾಗೂ ಆಮ್ ಆದ್ಮಿ ನಡುವೆ ತ್ರಿಕೋಣ ಪೈಪೋಟಿ ಕಂಡು ಬಂದರು ಸಹ,
ಆಪ್ ಹಾಗೂ ಬಿಜೆಪಿ ನೇರಾ ನೇರ ಹಣಾಹಣಿ ಇದೆ ಎನ್ನಲಾಗಿದೆ. ಇದೇ ತಿಂಗಳು 8 ರಂದು ಮತ ಏಣಿಕೆ ನಡೆಯಲಿದೆ
