ಇಂದು ತಮ್ಮ 35 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ವಿರಾಟ್ ಕೊಹ್ಲಿ ಇಂದು ಅದ್ಭುತ ಪ್ರದರ್ಶನ ನೀಡಿದರು. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ 35 ನೇ ಹುಟ್ಟುಹಬ್ಬದಂದು ವಿರಾಟ್ ಕೊಹ್ಲಿ ತಮ್ಮ 49 ನೇ ODI ಶತಕ ಬಾರಿಸಿ, ಸಚಿನ್ ತೆಂಡೂಲ್ಕರ್ ಅವರ ಧಾಖಲೆ ಸರಿಗಟ್ಟಿದರು. ವಿರಾಟ್ ಕೊಹ್ಲಿ 289 ಪಂದ್ಯಗಳ 277 ಇನಿಂಗ್ಸ್‌ಗಳನ್ನ ಆಡಿ 49ನೇ ಶತಕ ಸಿಡಿಸುವಲ್ಲಿ ಯಶಸ್ವಿಯಾದರು. ಕ್ರಿಕೇಟ್ ದೇವರು ಸಚಿನ್ ತೆಂಡುಲ್ಕರ್ 463 ಪಂದ್ಯಗಳ 452 ಇನಿಂಗ್ಸ್‌ಗಳನ್ನಾಡಿ 49 ಏಕದಿನ ಶತಕ ಸಿಡಿಸಿದ್ದರು.
