ಧಾರವಾಡದ ಪೋರನೊಬ್ಬ ತನ್ನ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಳ್ಳುತ್ತಿದ್ದಾನೆ. ಶೈಕ್ಷಣಿಕ ಕಾಶಿ ಎಂದು ಹೆಸರಾದ ಧಾರವಾಡದಲ್ಲಿ ಮಗನ ಹುಟ್ಟುಹಬ್ಬದ ಪ್ರಯುಕ್ತ ನೂರು ಜನರಿಗೆ ಉಚಿತ ಸ್ಪರ್ಧಾತ್ಮಕ ತರಬೇತಿ ನೀಡಲು ಪಾಲಕರು ಮುಂದಾಗಿದ್ದಾರೆ. ಇದೇ ದಿನಾಂಕ 13 ರಂದು ಅಮೀರ ಹಮ್ಮ್ಜ ಸೈದನವರ ತನ್ನ 8 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾನೆ. ಮಗನ ಹುಟ್ಟುಹಬ್ಬಕ್ಕೆ ಧಾರವಾಡದ ರಾಜರತ್ನ ಕರಿಯರ್ ಅಕಾಡೆಮಿಯಲ್ಲಿ ನೂರು ಜನರಿಗೆ ಉಚಿತ ಸ್ಪರ್ಧಾತ್ಮಕ ತರಬೇತಿ ನೀಡಲಾಗುವದು ಎಂದು ಸಾದಿಕ್ ಸೈದನವರ ತಿಳಿಸಿದ್ದಾರೆ.
ಮಗನ ಹುಟ್ಟುಹಬ್ಬಕ್ಕೆ ದುಂದು ವೆಚ್ಚ ಮಾಡುವ ಬದಲು, ನೂರು ಜನರಿಗೆ 6 ತಿಂಗಳ ಕಾಲ PSI / KAS/ ತರಬೇತಿ ನೀಡಲಾಗುವದು, ಇದಕ್ಕಾಗಿ 5 ಲಕ್ಷ ರೂಪಾಯಿ ವೆಚ್ಚ ಮಾಡುತ್ತಿದ್ದೇವೆ ಎಂದು ಯುವ ಕಾಂಗ್ರೇಸ್ ನಾಯಕ ಸಾದಿಕ್ ಸೈದನವರ ತಿಳಿಸಿದ್ದಾರೆ. ನವೆಂಬರ್ 15 ರಿಂದ ಉಚಿತ ತರಗತಿಗಳು ಆರಂಭವಾಗಲಿವೆ.
ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಅಮೀರ್ ನಿಗೆ ಜನ್ಮದಿನದ ಶುಭಾಶಯಗಳು ????