Download Our App

Follow us

Home » ರಾಜಕೀಯ » ಧಾರವಾಡ ಲೋಕಸಭಾ ಕ್ಷೇತ್ರ. ಕ್ಷೀಣಿಸುತ್ತಿರುವ ಬಿಜೆಪಿ ಭದ್ರಕೋಟೆ. 1962 to 2024 ಡಿಟೇಲ್ ರಿಪೋರ್ಟ್

ಧಾರವಾಡ ಲೋಕಸಭಾ ಕ್ಷೇತ್ರ. ಕ್ಷೀಣಿಸುತ್ತಿರುವ ಬಿಜೆಪಿ ಭದ್ರಕೋಟೆ. 1962 to 2024 ಡಿಟೇಲ್ ರಿಪೋರ್ಟ್

ರಾಜ್ಯದ ಅತ್ಯಂತ ಪ್ರತಿಷ್ಟಿತ ಲೋಕಸಭಾ ಕ್ಷೇತ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ. 1962 ರಿಂದ ಕಾಂಗ್ರೇಸ್ಸಿನಿಂದ, ಸರೋಜಿನಿ ಮಹಿಷಿ ಮತ್ತು ಡಿ ಕೆ ನಾಯ್ಕರ ಅವರು ಆಯ್ಕೆಯಾಗುತ್ತ ಬಂದ ಈ ಕ್ಷೇತ್ರವನ್ನು ಬಿಜೆಪಿ 1996 ರಲ್ಲಿ ತನ್ನ ತೆಕ್ಕೆಗೆ ಹಾಕಿಕೊಂಡಿತು. 1996 ರಲ್ಲಿ ವಿಜಯ ಸಂಕೇಶ್ವರ 11 ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದರು.

ಅಲ್ಲಿಂದ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಜಯಭೇರಿ ಬಾರಿಸುತ್ತ ಹೊರಟ ಬಿಜೆಪಿ ಈ ಕ್ಷೇತ್ರವನ್ನು ಭದ್ರವಾಗಿ ಇಟ್ಟುಕೊಂಡಿದೆ. ವಿಜಯ ಸಂಕೇಶ್ವರ ಅವರ ನಂತರ ಆ ಸ್ಥಾನದಲ್ಲಿ ಪ್ರಲ್ಲಾದ ಜೋಶಿ ಗಟ್ಟಿಯಾಗಿ ಬೇರೂರಿದ್ದಾರೆ. ಕೇಂದ್ರ ಸಚಿವರಾಗಿರುವ ಜೋಶಿ, ಸಧ್ಯ ಪಕ್ಷದ ರಾಷ್ಟ್ರೀಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಆದರೆ ಅವರು ಪ್ರತಿನಿಧಿಸುವ ಕ್ಷೇತ್ರ ಕ್ರಮೇಣ ಕ್ಷಿಣಿಸುತ್ತಿದೆ.

1962 ರಿಂದ ಲೋಕಸಭೆಗೆ ಆಯ್ಕೆಯಾದವರ ವಿವರ ನೋಡೋದಾದ್ರೆ

1962 ರಿಂದ 1977 ರ ವರೆ ಸತತವಾಗಿ ನಾಲ್ಕು ಬಾರಿ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸರೋಜಿನಿ ಮಹಿಷಿ, ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 1977 ರಲ್ಲಿ ನಾಲ್ಕನೇ ಬಾರಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಸರೋಜಿನಿ ಮಹಿಷಿ,  205627 ಮತ ಪಡೆದು ಆಯ್ಕೆಯಾಗಿದ್ದರು.

1980 ರಲ್ಲಿ ನಡೆದ   ಚುನಾವಣೆಯಲ್ಲಿ  ಡಿ.ಕೆ.ನಾಯ್ಕರ್ ಅವರು  ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ಸ್ಪರ್ಧಿಸಿ 208269 ಮತಗಳನ್ನು ಪಡೆದು ಆಯ್ಕೆಯಾಗಿದ್ದರು.

1984 ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಡಿ ಕೆ ನಾಯ್ಕರ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನಿಂದ ಸ್ಪರ್ಧಿಸಿ 229865 ಮತಗಳನ್ನು ಪಡೆದು ಎರಡನೇ ಬಾರಿ ಆಯ್ಕೆಯಾದರು.

1989 ರಲ್ಲಿ ನಡೆದ ಚುನಾವಣೆಯಲ್ಲಿ ಡಿ.ಕೆ.ನಾಯ್ಕರ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನಿಂದ ಸ್ಪರ್ಧಿಸಿ 276545 ಮತಗಳನ್ನು ಪಡೆದು ಮೂರನೇ ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

1991 ರಲ್ಲಿ ನಡೆದ ಚುನಾವಣೆಯಲ್ಲಿ ಡಿ.ಕೆ.ನಾಯ್ಕರ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನಿಂದ ಸ್ಪರ್ಧಿಸಿ 157682 ಮತ ಪಡೆದು ನಾಲ್ಕನೇ ಬಾರಿಗೆ ಸಂಸದರಾಗಿ ಆಯ್ಕೆಯಾದರು.

1962 ರಿಂದ ಸತತವಾಗಿ ಆಯ್ಕೆಯಾಗುತ್ತ ಬಂದಿದ್ದ ಕಾಂಗ್ರೇಸ್ ಗೆಲುವಿಗೆ ವಿಜಯ ಸಂಕೇಶ್ವರ ಅವರು ಬ್ರೇಕ್ ಹಾಕಿದರು. ಅಲ್ಲಿಂದ ಕಾಂಗ್ರೇಸ್ ಹೆಸರಿಲ್ಲದಂತೆ ಹೋಗಿದ್ದು ಇತಿಹಾಸ. ಆ ಕಾಲಕ್ಕೆ ಕತ್ತೆ ನಿಂತರು ಕಾಂಗ್ರೇಸ್ ಗೆಲ್ಲತ್ತೆ ಅನ್ನೋ ಮಾತು ಕೇಳಿ ಬರುತ್ತಿತ್ತು. ಕಾಂಗ್ರೇಸ್ ಪಕ್ಷ ಅಷ್ಟೊಂದು ಬೇರು ಬಿಟ್ಟಿದ್ದ ಕಾಲವದು. 1996 ರಲ್ಲಿ ಕಾಂಗ್ರೇಸ್, ಬಿಜೆಪಿ ಅಭ್ಯರ್ಥಿ ವಿಜಯ ಸಂಕೇಶ್ವರ ಎದುರು ಸೋಲಿಗೆ ಶರಣಾಯಿತು. 

1996 ರಿಂದ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯದ್ದೇ ಕಾರುಬಾರು

1996 ರಲ್ಲಿ ಕಾಂಗ್ರೇಸ್ ಭದ್ರಕೋಟೆಯನ್ನು ಭೇದಿಸಿದ್ದ ವಿಜಯ ಸಂಕೇಶ್ವರ ಮೊದಲ ಬಾರಿಗೆ ಲೋಕಸಭೆಗೆ ಪ್ರವೇಶಿಸಿದರು. ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ವಿಜಯ ಸಂಕೇಶ್ವರ 228572 ಮತಗಳನ್ನು ಪಡೆದು ಆಯ್ಕೆಯಾದರು. ಕಾಂಗ್ರೇಸನಿಂದ ಸ್ಪರ್ಧಿಸಿ ನಾಲ್ಕು ಬಾರಿ ಆಯ್ಕೆಯಾಗಿದ್ದ ಡಿ ಕೆ ನಾಯ್ಕರ 149768 ಮತ ಪಡೆದು ಮೂರನೇ ಸ್ಥಾನಕ್ಕೆ ಕುಸಿದರು.

1998 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಇಂದ ಸ್ಪರ್ಧಿಸಿದ್ದ ವಿಜಯ ಸಂಕೇಶ್ವರ, 339660 ಮತಗಳನ್ನು ಪಡೆದು ಎರಡನೇ ಬಾರಿ ಆಯ್ಕೆಯಾದರು.

1999 ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿದ್ದ ವಿಜಯ ಸಂಕೇಶ್ವರ 345197 ಮತ ಪಡೆದು ಮೂರನೇ ಬಾರಿಗೆ ಸಂಸದರಾಗಿ ಆಯ್ಕೆಯಾದರು.

2004 ರಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ, ಪ್ರಲ್ಲಾದ ಜೋಶಿಯವರನ್ನು ಕಣಕ್ಕಿಳಿಸಿತು. ಬಿಜೆಪಿ ಅಭ್ಯರ್ಥಿಯಾಗಿದ್ದ ಜೋಶಿ 385084 ಮತ ಪಡೆದು ಮೊದಲ ಬಾರಿಗೆ ಲೋಕಸಭೆಯ ಮೆಟ್ಟಲು ಹತ್ತಿದರು. ಅಲ್ಲಿಂದ ಇಲ್ಲಿಯವರೆಗೆ ಪ್ರಲ್ಲಾದ ಜೋಶಿ ಸತತವಾಗಿ ಆಯ್ಕೆಯಾಗುತ್ತ ಬಂದಿದ್ದಾರೆ. 

ಕೇಂದ್ರ ಸಚಿವರಾಗಿರುವ ಜೋಶಿ, ರಾಷ್ಟ್ರಮಟ್ಟದ ನಾಯಕರಾಗಿ ಬೆಳೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಸಂಸದೀಯ ವ್ಯವಹಾರಗಳ ಮತ್ತು ಕಲ್ಲಿದ್ದಲು ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ.

2024 ರ ಹೊತ್ತಿಗೆ ಕ್ಷಿಣಿಸುತ್ತಿರುವ ಬಿಜೆಪಿ ಭದ್ರಕೋಟೆ

ಈ ಸಲದ ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆ ತೀವ್ರ ಕೂತುಹಲ ಕೆರಳಿಸಿದೆ. ಜಗದೀಶ ಶೆಟ್ಟರ ಬಿಜೆಪಿ ಬಿಟ್ಟು ಕಾಂಗ್ರೇಸ್ ತೆಕ್ಕೆಗೆ ಜಾರಿದ್ದು, ಆಂತರಿಕ ಭಿನ್ನಮತ ಸೃಷ್ಟಿಯಾಗಿದ್ದು, ಕುಂದಗೋಳದ ಮಾಜಿ ಶಾಸಕ ಎಸ್ ಐ ಚಿಕ್ಕನಗೌಡರ ಬಿಜೆಪಿಯಿಂದ ದೂರಾಗಿದ್ದು, ನವಲಗುಂದದ ಮಾಜಿ ಶಾಸಕ ಮತ್ತು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಬಿಜೆಪಿ ಪಕ್ಷದ ಚಟುವಟಿಕೆಯಿಂದ ಕಾಣಿಸಿಕೊಳ್ಳದಿರುವದು, ಬಿಜೆಪಿ ಭದ್ರಕೋಟೆ ಕ್ಷಿಣಿಸಲು ಕಾರಣವಾಗಿದೆ. ಅಲ್ಲದೆ ಈ ಬಾರಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಜಾತಿ ಸಮಿಕರಣದ ಚರ್ಚೆ ಆರಂಭವಾಗಿದ್ದು, ಬಿಜೆಪಿ ಭದ್ರಕೋಟೆ ಅಲ್ಲಾಡಿಸಲು ತೆರೆಮರೆಯ ಕಸರತ್ತು ನಡೆದಿದೆ.

ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು, ನಾಲ್ಕರಲ್ಲಿ ಕಾಂಗ್ರೇಸ್ ಹಾಗೂ ನಾಲ್ಕರಲ್ಲಿ ಬಿಜೆಪಿ ಜಯಗಳಿಸಿವೆ. ಶಿಗ್ಗಾವಿ, ಕುಂದಗೋಳ, ಹುಬ್ಬಳ್ಳಿ ಧಾರವಾಡ ಸೆಂಟ್ರಲ್, ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರೆ,

ಧಾರವಾಡ ಗ್ರಾಮೀಣ, ಕಲಘಟಗಿ, ಹುಬ್ಬಳ್ಳಿ ಧಾರವಾಡ ಪೂರ್ವ ಮೀಸಲು, ನವಲಗುಂದ ಕ್ಷೇತ್ರದಲ್ಲಿ ಕಾಂಗ್ರೇಸ್ ಶಾಸಕರಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಮತ್ತು ಕಾಂಗ್ರೇಸ್ ಗೆ ಬಂದಿರುವ ಸರಾಸರಿ ಮತಗಳ ಪೈಕಿ ಬಿಜೆಪಿ ಅಭ್ಯರ್ಥಿಗಳು 50 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದಾರೆ.

ಧಾರವಾಡ ಲೋಕಸಭಾ ಕ್ಷೇತ್ರ ರಾಜ್ಯದ ಅತ್ಯಂತ ಪ್ರತಿಷ್ಟಿತ ಕ್ಷೇತ್ರಗಳಲ್ಲಿ ಒಂದಾಗಿದ್ದು, ಬಿಜೆಪಿ ಸೋಲಿಸಲು ಇನ್ನಿಲ್ಲದ ಪ್ರಯತ್ನ ನಡೆದಿರುವದಂತೂ ಸತ್ಯ. ಸಧ್ಯ ಹುಬ್ಬಳ್ಳಿ ಧಾರವಾಡ ಮಹಾನಗರಗಳಲ್ಲಿ ಬಿಜೆಪಿ ಪರ ಅಲೆಯಿದ್ದು, ಗ್ರಾಮೀಣ ಭಾಗದಲ್ಲಿ ಕಾಂಗ್ರೇಸ್ ಪರ ಅಲೆ ಇದೆ. ಬಿಜೆಪಿಯಲ್ಲಿದ್ದ ಜಗದೀಶ ಶೆಟ್ಟರ, ಮೋಹನ ಲಿಂಬಿಕಾಯಿ ಈಗಾಗಲೇ ಕಾಂಗ್ರೇಸ್ ಸೇರಿದ್ದು,. ಎಸ್ ಐ ಚಿಕ್ಕನಗೌಡರ, ಶಂಕರ ಪಾಟೀಲ್ ಮುನೇನಕೊಪ್ಪ ಬಿಜೆಪಿಗೆ ಶಾಕ್ ನೀಡ್ತಾರೆ ಅನ್ನೋ ಲೆಕ್ಕಾಚಾರ ಆರಂಭವಾಗಿದೆ. ಬಿಜೆಪಿಯಲ್ಲಿ ಜೋಡೆತ್ತುಗಳಾಗಿದ್ದ ಜಗದೀಶ ಶೆಟ್ಟರ ಹಾಗೂ ಪ್ರಲ್ಲಾದ ಜೋಶಿ ಇದೀಗ ಒಂಟೆತ್ತುಗಳಾಗಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರೆಡ್ಡಿ ಏನಂದಿರಿಗೀನಾ ! ರೊಚ್ಚಿಗೆದ್ದ ರಾಮುಲು. ಗಣಿ ನಾಡಿನಲ್ಲಿ ದೂಳು ಮೆತ್ತಿಕೊಂಡ ನಾಯಕರು

ಬಳ್ಳಾರಿ ರಾಜಕೀಯ, ಒಂದು ಕಾಲಕ್ಕೆ ರಾಜ್ಯದ ರಾಜಕಾರಣವನ್ನು ತನ್ನತ್ತ ಸೆಳೆದಿತ್ತು. ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಜೋಡಿ, ಬಳ್ಳಾರಿಯನ್ನು ಬಿಜೆಪಿಯ ಭದ್ರಕೋಟೆಯನ್ನಾಗಿ ಮಾಡಿದ್ದರು. ಆದರೆ ಈಗ ಬಳ್ಳಾರಿಯಲ್ಲಿ

Live Cricket

error: Content is protected !!