Download Our App

Follow us

Home » ಜೀವನಶೈಲಿ » ಮದುವೆ ಭಾಗ್ಯಕ್ಕಾಗಿ ಪಾದಯಾತ್ರೆ ಹೊರಟ ಯುವಕರು

ಮದುವೆ ಭಾಗ್ಯಕ್ಕಾಗಿ ಪಾದಯಾತ್ರೆ ಹೊರಟ ಯುವಕರು

ಮದುವೆ ಎಂಬುದು ಸಾಮಾನ್ಯ ಪ್ರಕ್ರಿಯೆ. ಅದರಲ್ಲಿಯೂ ಹಳ್ಳಿಗಾಡಿನಲ್ಲಿ ವ್ಯವಸಾಯ ಮಾಡಿಕೊಂಡು ಇರುವ ರೈತರ ಮಕ್ಕಳಿಗೆ ಕನ್ಯೆ ಸಿಗುವದಿಲ್ಲ ಎಂಬ ಕೊರಗು. ಹೇಗಾದ್ರು ಮಾಡಿ ಮಾದಪ್ಪ ಮದುವೆ ಭಾಗ್ಯ ಕರುಣಿಸಲಿ ಎಂದು ಯುವಕರು ಪಾದಯಾತ್ರೆ ಹೊರಟಿದ್ದಾರೆ. ಮಲೇ ಮಹದೇಶ್ವರ ಬೆಟ್ಟದಲ್ಲಿರುವ ಮಾದಪ್ಪನ ಸನ್ನಿಧಿಗೆ ಮಂಡ್ಯದಿಂದ ಯುವಕರು ಮದುವೆ ಭಾಗ್ಯಕ್ಕಾಗಿ ಪಾದಯಾತ್ರೆ ಹೊರಟಿದ್ದಾರೆ. ದೀಪಾವಳಿ ಎಂದು ಮಾದಪ್ಪನ ಜಾತ್ರೆ ನಡೆಯಲಿದ್ದು, ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದೊಡ್ಡಮುಲಗೂಡು ಗ್ರಾಮದ ಯುವಕರು ತಂದೆ ತಾಯಿಯೊಂದಿಗೆ ಪಾದಯಾತ್ರೆ ಆರಂಭಿಸಿದ್ದಾರೆ. ಮದುವೆ ವಯಸ್ಸಿಗೆ ಬಂದಿರುವ ಯುವ ರೈತರಿಗೆ ಹೆಣ್ಣು ಕೊಡ್ತಿಲ್ಲ,

ಅದರಲ್ಲೂ ಹಳ್ಳಿಯಲ್ಲಿದ್ದಾರೆ ಎಂದರೇ ಬೆಲೆಯು ಕೊಡ್ತಿಲ್ಲ ಎಂಬ ಕೊರಗು ಪಾಲಕರಲ್ಲಿದೆ. 130 ಕಿ.ಮೀ ದೂರದ ಮಾದಪ್ಪನ ಸನ್ನಿಧಿಗೆ ಪಾದಯಾತ್ರೆ ನಡೆಸಿ ಹರಕೆ ಹೊರಲು ಸಿದ್ದರಾಗಿದ್ದಾರೆ. ಮಾದಪ್ಪನ ಸನ್ನಿಧಿಯಲ್ಲಿ ಮದುವೆಗಾಗಿ ಹರಕೆ ಹೊರಲಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!