ರೌಡಿ ಶೀಟರನೊಬ್ಬನ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಲ್ಲಾದ ಜೋಶಿ, ಧಾರವಾಡ ಶಹರ ಠಾಣೆಯ ಇನ್ಸಪೆಕ್ಟರ ಕಾಡದೇವರಮಠ ಜೊತೆ ಅನುಚಿತವಾಗಿ ನಡೆದುಕೊಂಡಿದ್ದನ್ನು ಕಾಂಗ್ರೇಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಖಂಡಿಸಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸ್ ತನ್ನದೇ ಆದಂತ ಘನತೆ ಗೌರವ ಹೊಂದಿದೆ. ಸಾರ್ವಜನಿಕ ಹಿತರಕ್ಷಣೆ ಮಾಡುವ ನಿಟ್ಟಿನಲ್ಲಿ ಅವಳಿ ನಗರದ ಪೊಲೀಸರು ಹಬ್ಬ ಹರಿದಿನ ಎನ್ನದೆ ಕೆಲಸ ಮಾಡುತ್ತಾರೆ. ಅವಳಿ ನಗರದ ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಅಪರಾಧ ಚಟುವಟಿಕೆ ನಿಲ್ಲಿಸಲು ಹೋದ ಇನ್ಸಪೆಕ್ಟರಗೆ ಬಾಯಿಗೆ ಬಂದಂತೆ ಮಾತನಾಡಿದ್ದು, ಕೇಂದ್ರ ಸಚಿವರಿಗೆ ಶೋಭೆ ತರುವದಿಲ್ಲ ಎಂದು ಹೇಳಿದ್ದಾರೆ.
ಸಚಿವ ಪ್ರಲ್ಲಾದ ಜೋಶಿ, ತಮ್ಮ ಪಕ್ಷದ ಕಾರ್ಯಕರ್ತರ ಎದುರು ಇನ್ಸಪೆಕ್ಟರ ಕಾಡದೇವರಮಠರನ್ನು ಅವಮಾನಿಸಿ, ಅವರಿಗೆ ಬೆದರಿಕೆ ಒಡ್ಡಿದ ರೀತಿಯನ್ನು ರಜತ್ ಉಳ್ಳಾಗಡ್ಡಿಮಠ ಖಂಡಿಸಿದ್ದಾರೆ. ಅಲ್ಲದೆ ಘನತೆವೆತ್ತ ಕೇಂದ್ರ ಸಚಿವರು ತಮ್ಮ ತಪ್ಪನ್ನು ತಿದ್ದಿಕೊಂಡು, ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.
