ಧಾರವಾಡದಿಂದ ಗೋವಾ ಮಾರ್ಗದಲ್ಲಿರುವ ಮಂಡ್ಯಾಳ ಕ್ರಾಸ್ ಹತ್ತಿರ ಕಂಟೆನರ್ ವಾಹನಕ್ಕೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ಕಂಟೆನರ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಕಂಟೆನರ್ ವಾಹನ ಧಾರವಾಡ ಕಡೆ ಬರುತಿತ್ತು ಎನ್ನಲಾಗಿದ್ದು, ಕಂಟೆನರ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ವಾಹನಕ್ಕೆ ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ವಾಹನದಿಂದ ಜಿಗಿದ ಚಾಲಕ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದಾನೆ. ಘಟನೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ದೌಡಾಯಿಸಿದ್ದಾರೆ.
