ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ. ಶಿರಹಟ್ಟಿಯಿಂದ ಕೋಳಿವಾಡ ಮಾರ್ಗವಾಗಿ ಹುಬ್ಬಳ್ಳಿಗೆ ಬರುತ್ತಿದ್ದ ವಾಯುವ್ಯ ಸಾರಿಗೆ ಸಂಸ್ಥೆಯ ಬಸ್ಸಿನ ಎಕ್ಷೆಲ್ ಕಟ್ ಆದ ಪರಿಣಾಮ ಬಸ್ಸು ನಿಯಂತ್ರಣ ತಪ್ಪಿದೆ. ಬಸ್ಸಿನಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ಹೇಳಲಾಗಿದೆ. ಎಕ್ಷೆಲ್ ಕಟ್ ಆದ ಬಸ್ಸನ್ನು ನಿಯಂತ್ರಿಸಿದ ಚಾಲಕ ಸುಮಾರು 50 ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸಿದ್ದಾನೆ.
ಅಪಘಾತ ತಪ್ಪಿಸಿದ ವಾಯುವ್ಯ ಸಾರಿಗೆ ಬಸ್ಸಿನ ಚಾಲಕನನ್ನು ಕೋಳಿವಾಡ ಗ್ರಾಮಸ್ಥರು ಸನ್ಮಾನಿಸಿದ್ದಾರೆ.