ಬಿಜೆಪಿಯಲ್ಲಿ ಯಾವದೇ ಸ್ಥಾನ ಸಿಗದೇ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹುಚ್ಚನಾಗಿದ್ದಾನೆ. ಸುಳ್ಳು ಮಾಡುತ್ತಾ ಸಮಾಜದ ನೆಮ್ಮದಿ ಕೆಡಿಸುತ್ತಿದ್ದಾರೆಂದು ಧಾರವಾಡ ಅಂಜುಮನ್ ಸಂಸ್ಥೆಯ ಮಾಜಿ ಹಾಗೂ ಕಾಂಗ್ರೇಸ್ ಮುಖಂಡ ಇಸ್ಮಾಯಿಲ್ ತಮಟಗಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಮೌಲ್ವಿ ತನ್ವಿರಾ ಹಾಸಿಂ ಪೀರಾ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಖಂಡಿಸುತ್ತೇವೆ ಎಂದ ಇಸ್ಮಾಯಿಲ್, ಯತ್ನಾಳ ರಾಜಕೀಯ ಮುಗಿದು ಹೋದರೂ ಏನೇನೋ ಮಾತನಾಡುತ್ತಿದ್ದಾರೆ. ಸಧ್ಯ ಬೆಳಗಾವಿ ಅಧಿವೇಶನದಲ್ಲಿರುವ ಯತ್ನಾಳ, ಪಕ್ಕದ ಧಾರವಾಡಕ್ಕೆ ಬಂದು ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಲಹೆ ಸೂಚನೆ. ಅನೇಕ ಬಿಜೆಪಿ ನಾಯಕರು ತನ್ವಿರ ಹಾಸಿಂ ಪೀರಾ ಅವರ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಗಡ್ಕರಿ ಸಹ ಪೋಟೋದಲ್ಲಿದ್ದಾರೆ ಎಂದು ಹೇಳಿದರು. ಮಾನಸಿಕ ಅಸ್ವಸ್ಥರಾಗಿರುವ ಯತ್ನಾಳ ಚಿಕಿತ್ಸೆ ಪಡೆಯುವುದು ಅಗತ್ಯವಾಗಿದೆ ಎಂದು ಹೇಳಿದರು. ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಮಾತನಾಡುವುದನ್ನು ಬಿಟ್ಟು, ಹುಚ್ಚುಚ್ಚರಾಗಿ ಮಾತನಾಡುವುದನ್ನು ಯತ್ನಾಳ ನಿಲ್ಲಿಸಲಿ ಎಂದು ಹೇಳಿದರು.
ಅಷ್ಟಕ್ಕೂ ಯತ್ನಾಳ ಟ್ವಿಟ್ ಮಾಡಿದ್ದ ಫೋಟೋದಲ್ಲಿ ಇರಾಕ್ ದೇಶದ ದ್ವಜ ಇದೆ. ಜೊತೆಗೆ ಅಲ್ಲಿ ಧರ್ಮಗುರುಗಳು ಇದ್ದಾರೆ. ಇದೆಲ್ಲದರ ಬಗ್ಗೆ ಅರಿವು ಅವರಿಗೆ ಇರಬೇಕಿತ್ತು. ಆದರೆ ಅವರ ತಲೆನೇ ಸರಿಯಿಲ್ಲ ಎಂದು ವ್ಯಂಗ್ಯವಾಡಿದರು.
