ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ಮುಗಿದ ಬಳಿಕ ಬಿಜೆಪಿ ಭರ್ಜರಿ ಜಯದೊಂದಿಗೆ ನಾಗಲೋಟದಲ್ಲಿ ಓಡುತ್ತಿದೆ. ಈ ನಡುವೆ ರಾಜಸ್ಥಾನ ಉಸ್ತುವಾರಿ ವಹಿಸಿಕೊಂಡಿದ್ದ ಸಚಿವ ಜೋಶಿ ತಂತ್ರಗಾರಿಕೆ ಸಫಲವಾಗಿದೆ. ಇದೆಲ್ಲದರ ಹಿನ್ನಲೆಯಲ್ಲಿ ಅವರ ಅಭಿಮಾನಿಗಳು ಇಂದು ಜೋಶಿ ಸ್ವಾಗತಕ್ಕೆ ಫುಲ್ ತಯಾರಿ ಮಾಡಿಕೊಂಡಿದ್ದರು. ಗೋಕುಲ್ ರಸ್ತೆಯ ಉದ್ದಕ್ಕೂ ರಸ್ತೆಯ ವಿಭಜಕಗಳಲ್ಲಿ ಇರುವ ಸಣ್ಣ ಸಣ್ಣ ಗಿಡಗಳಿಗೆ ಬಿಜೆಪಿ ದ್ವಜ ಕಟ್ಟಿ ಶೃಂಗಾರ ಮಾಡಿದ್ದರು.
ಬಿಜೆಪಿ ದ್ವಜದ ಭಾರಕ್ಕೆ ನೆಲ ಕಚ್ಚುವಂತೆ ಕಾಣುತ್ತಿರುವ ಗಿಡಗಳ ವಿಷಯ ಇಟ್ಟುಕೊಂಡು ಕಾಂಗ್ರೆಸ್ ಮುಖಂಡ ಮುಂಬರುವ ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ರಜತ್ ಉಳ್ಳಾಗಡ್ಡಿ ಮಠ, ಜೋಶಿ ಅವರನ್ನು ಎಕ್ಸ್ ( ಟ್ವಿಟ್ ) ನಲ್ಲಿ ಕುಟುಕಿದ್ದಾರೆ.
ಊರಿಗೆಲ್ಲ ಬುದ್ದಿ ಹೇಳುವ ಪ್ರಹ್ಲಾದ್ ಜೋಶಿ ಅವರಿಗೆ ಯಾರಾದರೂ ತಿಳುವಳಿಕೆ ಹೇಳಲು ಆದೀತೇ?ಮರಗಿಡಗಳಿಗೆಲ್ಲ ಪಕ್ಷದ ಬಾವುಟ ನೆಟ್ಟರೆ ಕಮಲ ಅರಳೀತೇ? ನಿಮ್ಮ ಒಣ ಪ್ರತಿಷ್ಠೆಯ ಭಾರ ಹೊತ್ತ ಆ ಸಣ್ಣ ಗಿಡಗಳ ಜೀವ ಉಳಿದೀತೇ?
ಹುಬ್ಬಳ್ಳಿ ಧಾರವಾಡದ ಸಮಸ್ತ ಮರಗಿಡಗಳು ನಿಮ್ಮನ್ನು ಹಾಗೂ ನಿಮ್ಮ ಪಕ್ಷವನ್ನು ಶಪಿಸುತ್ತ ಸ್ವಾಗತಿಸುತ್ತಿವೆ! ದಯಮಾಡಿಸಿ ಕೇಂದ್ರ ಸಚಿವರೇ!ಎಂದು ಕೇಂದ್ರ ಸಚಿವರಿಗೆ ವ್ಯಂಗ್ಯವಾಗಿ ಪೋಸ್ಟ್ ಹಾಕಿದ್ದಾರೆ.