ಧಾರವಾಡ ಲೋಕಸಭಾ ಕ್ಷೇತ್ರದಿಂದ ನಾನು ಸ್ಪರ್ಧಿಸಲ್ಲ. ಪಕ್ಷದ ಯಾರಿಗೆ ಟಿಕೇಟ್ ಕೊಟ್ಟರು ಗೆಲುವಿಗೆ ಶ್ರಮಿಸುವದಾಗಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿಗಳು ದೆಹಲಿಗೆ ಹೋದ ಮರುದಿನ ನಾನು ವೈಯುಕ್ತಿಕ ಕೆಲಸಕ್ಕೆ ದೆಹಲಿಗೆ ಹೋಗಿದ್ದೆ, ಆದರೆ ಯಾವದೇ ಪಕ್ಷದ ಹೈಕಮಾಂಡ ನಾಯಕರನ್ನು ಭೇಟಿ ಮಾಡಿಲ್ಲ ಎಂದರು. ನಾನು ಸ್ಪರ್ಧಿಸುವದಿಲ್ಲ ಎಂದು ಮುಖ್ಯಮಂತ್ರಿಗಳನ್ನು ಎದುರೇ ಹೇಳಿದ್ದೇನೆ. ನನ್ನ ಹೆಸರು ಯಾಕೆ ಪ್ರಸ್ತಾಪವಾಗುತ್ತಿದೆ ಅನ್ನೋದು ಗೊತ್ತಿಲ್ಲ ಎಂದರು.
ಈಗಾಗಲೇ ಟಿಕೇಟ್ ಆಕಾಂಕ್ಷಿಗಳ ಪಟ್ಟಿ ರಾಜ್ಯ ನಾಯಕರಿಗೆ ತಲುಪಿದೆ. ಹೈಕಮಾಂಡ ಶಾರ್ಟ ಲಿಸ್ಟ್ ಮಾಡಿದೆಯೋ ಅಥವಾ ಇಲ್ಲವೋ ಅನ್ನೋದು ಗೊತ್ತಿಲ್ಲ. ಆದರೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
