ಆಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದವನನ್ನು ಗ್ರಾಮಸ್ಥರೆ ಹಿಡಿದುಕೊಟ್ಟ ಘಟನೆ ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ ನಡೆದಿದೆ. ಹಣಸಿ ಗ್ರಾಮಕ್ಕೆ ದಿನನಿತ್ಯ ಸರಾಯಿ ತಂದು ಮಾರಾಟ ಮಾಡುತ್ತಿರುವ ಮಾಹಿತಿ ಪಡೆದ ಹಣಸಿ ಗ್ರಾಮದ ಮಹಿಳೆಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ನವಲಗುಂದ ಪೊಲೀಸರಿಗೆ ಗೊತ್ತಿಲ್ಲದೇ ಆಕ್ರಮ ಸಾರಾಯಿ ಮಾರಾಟ ನಡೆಯೋದಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಹಣಸಿ ಗ್ರಾಮದ ಬಡ ಕುಟುಂಬಗಳ ಯಜಮಾನ್ರು ಕುಡಿತಕ್ಕೆ ಶರಣಾಗಿದ್ದು, ಬರಗಾಲದಲ್ಲಿ ಬದುಕು ನಡೆಸೋದು ಕಷ್ಟವಾಗಿದೆ ಎಂದು ಮಹಿಳೆಯರು ಆಕ್ರೋಶ ಹೊರಹಾಕಿದರು. ನವಲಗುಂದ ತಾಲೂಕಿನ ಎಲ್ಲೆಡೆ ಆಕ್ರಮ ಸಾರಾಯಿ ಸರಬರಾಜು ಆಗುತ್ತಿದ್ದು, ಪೊಲೀಸರು ಮಾತ್ರ ಸುಮ್ಮನಿರುವದು ಸಂಶಯಕ್ಕೆ ಎಡೆಮಾಡಿದೆ.