ರಾಹುಲ್ ಗಾಂಧಿ ಇಂದು ಜಜ್ಜರ್‌ನ ಛಾರಾ ಗ್ರಾಮದಲ್ಲಿರುವ ವೀರೇಂದ್ರ ಆರ್ಯ ಅಖಾಡಾದಲ್ಲಿ ದೇಶದ ಖ್ಯಾತ ಕುಸ್ತಿ ಪಟುಗಳನ್ನು ಭೇಟಿ ಮಾಡಿದರು. ಖ್ಯಾತ ಕುಸ್ತಿಪಟು ಬಜರಂಗ್ ಪುನಿಯಾ ಮತ್ತು ಇತರ ಕುಸ್ತಿಪಟುಗಳನ್ನು ಭೇಟಿ ಮಾಡಿದ ರಾಹುಲ್ ಗಾಂಧಿ ಇತ್ತೀಚಿಗೆ ಕುಸ್ತಿ ಫೆಡರೇಷನ್ ಅಧ್ಯಕ್ಷನ ಆಯ್ಕೆ ಕುರಿತಂತೆ ಅಸಮಾಧಾನಗೊಂಡಿರುವ ಕ್ರೀಡಾಪಟುಗಳಿಗೆ ಬೆಂಬಲ ವ್ಯಕ್ತಪಡಿಸಿದರು.
ಕುಸ್ತಿ ಆಟದ ಬಗ್ಗೆ ಮಾಹಿತಿ ಪಡೆದುಕೊಂಡ ರಾಹುಲ್ ಗಾಂಧಿ, ದೇಶದ ಖ್ಯಾತ ಕುಸ್ತಿ ಪಟು, ಪದ್ಮಶ್ರೀ ವಿಜೇತ ಭಜರಂಗ ಪುನಿಯಾ ಜೊತೆ ಕುಸ್ತಿ ಆಡಿದರು.