ಧಾರವಾಡದ ಪ್ರತಿಷ್ಟಿತ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾಗೆ ಆಡಳಿತಾಧಿಕಾರಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಅಪ್ತ ಮಾಜಿ ಮೇಯರ ಈರೇಶ್ ಅಂಚಟಗೇರಿ ಅಧ್ಯಕ್ಷರಾಗಿ ನೇಮಕಗೊಂಡಿದ್ದನ್ನು ಪ್ರಶ್ನಿಸಿ ಮತ್ತು ಸಹಕಾರ ಸಂಘಗಳ ಉಪನಿಮಯಕ್ಕೆ ವ್ಯತಿರಿಕ್ತವಾಗಿ ಚುನಾವಣೆ ನಡೆಸದೆ ನಿಯಮ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ, ರಾಯಪ್ಪ ಬಾಳಪ್ಪ ಪುಡಕಲಕಟ್ಟಿ ಮತ್ತು ಮಲ್ಲಪ್ಪ ಪುಡಕಲಕಟ್ಟಿ ಮನವಿ ಸಲ್ಲಿಸಿದ್ದರು.
ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ಕಲಂ 27 ರನ್ವಯ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ( ಕರ್ನಾಟಕ ) ಧಾರವಾಡ ನೋಂದಣಿ ಸಂಖ್ಯೆ (dwd -s146-2006-07) ಈ ಸಂಘಕ್ಕೆ ಸಹಾಯಕ ಆಯುಕ್ತರು ಧಾರವಾಡ ಉಪವಿಭಾಗಾಧಿಕಾರಿಗಳು ಇವರನ್ನು ನೇಮಿಸಿ ಇಂದಿನಿಂದ 6 ತಿಂಗಳ ಕಾಲ ನೇಮಿಸಿ ಆದೇಶ ಸರ್ಕಾರ ಆದೇಶ ಹೊರಡಿಸಿದೆ. ನ್ಯಾಯಾಲಯದ ಆದೇಶದಂತೆ ಸಂಘಗಳ ಉಪನಿಯಮದಂತೆ 6 ತಿಂಗಳ ಒಳಗಾಗಿ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ, ಚುನಾಯಿತ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸುವಂತೆ ಆದೇಶಿಸಿದೆ. ಸರ್ಕಾರದ ಆದೇಶದನ್ವಯ ಧಾರವಾಡ ಉಪವಿಭಾಗಾಧಿಕಾರಿ ಶಾಲಮ್ ಹುಸೇನ್ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.
