ರಾಜ್ಯ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನೆನೆಗುದಿಗೆ ಬಿದ್ದಿದ್ದ ನಿಗಮ ಮಂಡಳಿ ನೇಮಕಕ್ಕೆ ಹೈಕಮಾಂಡ ಅಸ್ತು ಎಂದಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ. ಕರ್ನಾಟಕ ಫೈಲ್ಸ್ ಗೆ ಸಿಕ್ಕ ಖಚಿತ ಮಾಹಿತಿಯಂತೆ ಧಾರವಾಡ ಜಿಲ್ಲೆಯ ಇಬ್ಬರು ಶಾಸಕರು, ಹಾವೇರಿ ಜಿಲ್ಲೆಯ ಇಬ್ಬರು ಶಾಸಕರು ಹಾಗೂ ಗದಗ ಜಿಲ್ಲೆಯ ಒಬ್ಬ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಪಕ್ಕಾ ಆಗಿದೆ.
ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಯವರಿಗೆ ಭೂ ಸೇನಾ ನಿಗಮ ( ಕ್ರೆಡಿಲ್ ) ಹುಬ್ಬಳ್ಳಿ ಪೂರ್ವ ಮೀಸಲು ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯನವರಿಗೆ ಸ್ಲಮ್ ಬೋರ್ಡ, ಹಾನಗಲ ಶಾಸಕ ಶ್ರೀನಿವಾಸ ಮಾನೆಯವರಿಗೆ ಕರ್ನಾಟಕ ನೀರಾವರಿ ನಿಗಮದ ಅಧ್ಯಕ್ಷ ಸ್ಥಾನ ಬಹುತೇಕ ಖಚಿತವಾಗಿದೆ.
ಇನ್ನು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಹಾಗೂ ರೋಣ ಶಾಸಕ ಜೆ ಎಸ್ ಪಾಟೀಲರಿಗೂ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಅಂತಿಮಗೊಂಡಿದೆ. ಮೊದಲ ಹಂತದಲ್ಲಿ ಒಟ್ಟು 25 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲು ಪಕ್ಷದ ಹೈಕಮಾಂಡ ಒಪ್ಪಿಗೆ ಸೂಚಿಸಿದ್ದು, ನಾಳೆ ಅಥವಾ ನಾಳಿದ್ದು ಹೈಕಮಾಂಡ ರಾಜ್ಯದಿಂದ ಕಳಿಸಲಾದ ಪಟ್ಟಿಗೆ ಅಧಿಕೃತ ಮುದ್ರೆ ಒತ್ತಲಿದೆ. ಎರಡನೇ ಹಂತದ ನಿಗಮ ಮಂಡಳಿಗಳಿಗೆ 12 ಜನ ಪ್ರಮುಖ ಕಾರ್ಯಕರ್ತರ ಹೆಸರು ಕಳಿಸಲಾಗಿದ್ದು, ಶಾಸಕರ ಪಟ್ಟಿ ಬಿಡುಗಡೆ ಬಳಿಕ, ಕಾರ್ಯಕರ್ತರ ಪಟ್ಟಿಗೆ ಚಾಲನೆ ನೀಡಲಿದ್ದಾರೆ.
