ಜಾರಿ ನಿರ್ದೇಶನಾಲಯ ಧಾಖಲಿಸಿದ್ದ ಕೇಸಿಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರಗೆ ಸರ್ವೋಚ್ಚ ನ್ಯಾಯಾಲಯ ಬಿಗ್ ರಿಲೀಫ್ ನೀಡಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಡಿ ಕೆ ಶಿವಕುಮಾರ ಮನೆ ಮೇಲೆ ದಾಳಿ ನಡೆಸಿ, ಮನೆಯಲ್ಲಿ ಸಿಕ್ಕ ಕೋಟ್ಯಾಂತರ ಹಣ ಆಕ್ರಮದಿಂದ ಕೂಡಿದೆ ಎಂದು ಆರೋಪಿಸಿ ಐ ಪಿ ಸಿ ಸೆಕ್ಷನ್ 120ಬಿ ಅಡಿಯಲ್ಲಿ ಕೇಸ ಧಾಖಲು ಮಾಡಿತ್ತು. ಇದೆ ಕೇಸಿಗೆ ಸಂಬಂಧಿಸಿದಂತೆ ಡಿ ಕೆ ಜೈಲಿಗೂ ಹೋಗಿ ಬಂದಿದ್ದರು.
ಜಾರಿ ನಿರ್ದೇಶನಾಲಯ ಹಾಕಿದ್ದ ಕೇಸನ್ನು ರದ್ದು ಮಾಡಬೇಕೆಂದು ಡಿ ಕೆ ಹೈಕೋರ್ಟಗೆ ಅರ್ಜಿ ಹಾಕಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ ಡಿ ಕೆ ಶಿವಕುಮಾರ ಅರ್ಜಿಯನ್ನು ತಳ್ಳಿ ಹಾಕಿತ್ತು. ಸುಪ್ರೀಂ ಕೋರ್ಟ ಮೆಟ್ಟಲೇರಿದ್ದ ಡಿ ಕೆ ಗೆ ಕೊನೆಗೂ ಜಯ ಸಿಕ್ಕಿದೆ. ಇ ಡಿ ಧಾಖಲಿಸಿದ್ದ ಕೇಸನ್ನು ರದ್ದು ಮಾಡಿ ಆದೇಶ ಮಾಡಿದೆ.