ರಾಜ್ಯದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಗಾಬರಿ ಹುಟ್ಟಿಸಿದೆ. ಕಳೆದ ವರ್ಷದ ಲೆಕ್ಕ ನೋಡಿದಾಗ ಕರ್ನಾಟಕದಲ್ಲಿ ಪ್ರತಿ ದಿನ 34 ಜನ ಸಾವನ್ನಪ್ಪಿರುವ ಮಾಹಿತಿ ಹೊರಬಿದ್ದಿದೆ.
ಸಂಚಾರ ಮತ್ತು ಸುರಕ್ಷತೆ ವಿಭಾಗದ ಎ ಡಿ ಜಿ ಪಿ ಅಲೋಕ ಕುಮಾರ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಮಾರಣಾಂತಿಕ ಅಪಘಾತಗಳಲ್ಲಿ ಶೇಕಡಾ 5 ರಷ್ಟು ಹೆಚ್ಚಳವಾಗಿದೆ ಎಂದಿದ್ದಾರೆ.
ಅಜಾಗರೂಕ ಚಾಲನೆ, ಕಳಪೆ ಚಾಲನಾ ಕೌಶಲ್ಯ, ಕಳಪೆ ರಸ್ತೆ ಪರಿಸ್ಥಿತಿಗಳು, ಪಾದಚಾರಿಗಳಿಗೆ ಅಸಮರ್ಪಕ ಸೌಲಭ್ಯ ರಸ್ತೆ ಅಪಘಾತಕ್ಕೆ ಮುಖ್ಯ ಕಾರಣವಾಗಿವೆ.