ಮೈಸೂರು ಕೊಡಗು ಕ್ಷೇತ್ರದಿಂದ ಮೂರನೇ ಬಾರಿ ಬಿಜೆಪಿ ಟಿಕೇಟ್ ಅಕಾಂಕ್ಷಿಯಾಗಿದ್ದ ಪ್ರತಾಪ ಸಿಂಹರನ್ನು ಕಾಂಗ್ರೇಸ್ಸಿಗೆ ತರಲು ಲಾಭಿ ನಡೆದಿದೆ ಅನ್ನೋ ಸುದ್ದಿ ಕಾಂಗ್ರೇಸ್ ಅಂಗಳದಲ್ಲಿ ಹಬ್ಬಿದೆ.
ಪ್ರತಾಪ ಸಿಂಹರಿಗೆ ಮೈಸೂರು ಕೊಡಗು ಟಿಕೇಟ ತಪ್ಪಿದ ನಂತರ, ಪ್ರತಾಪ ಸಿಂಹ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಾಪ ಸಿಂಹರಿಗೆ ಟಿಕೇಟ ತಪ್ಪಿದ್ದರಿಂದ ಶಾಸಕ ತನ್ವಿರ ಸೇಠ ಸ್ವತಃ ಅಚ್ಚರಿ ಪಟ್ಟಿದ್ದರು.
ಪ್ರತಾಪ ಸಿಂಹರ ಪರ ಸಹಾನುಭೂತಿ ವ್ಯಕ್ತಪಡಿಸಿದ್ದ ಶಾಸಕ ತನ್ವಿರ ಸೇಠ, ಟಿಕೇಟ ಕೈತಪ್ಪತ್ತೆ ಎಂದು ಭಾವಿಸಿರಲಿಲ್ಲ ಎಂದು ಎಕ್ಸ್ ( ಟ್ವಿಟರ್ ) ನಲ್ಲಿ ಬರೆದುಕೊಂಡಿದ್ದರು. ತಮ್ಮ ಪರ ಸಹಾನುಭೂತಿ ವ್ಯಕ್ತಪಡಿಸಿದ್ದ ಶಾಸಕ ತನ್ವಿರ್ ಸೇಠರಿಗೆ ಪ್ರತಾಪ ಸಿಂಹ ಧನ್ಯವಾದ ಹೇಳಿದ್ದರು.
ಈಗ ಅದೇ ತನ್ವಿರ್ ಸೇಠ, ಪ್ರತಾಪ ಸಿಂಹರನ್ನು ಕಾಂಗ್ರೇಸ್ಸಿಗೆ ಕರೆತಂದು ಮೈಸೂರು ಕೊಡಗು ಕ್ಷೇತ್ರಕ್ಕೆ ಕಾಂಗ್ರೇಸ್ ಟಿಕೇಟ್ ಕೊಡಿಸಲು ಲಾಭಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಕಾಂಗ್ರೇಸ್ ಎರಡನೇ ಪಟ್ಟಿ ಬಿಡುಗಡೆಯಾಗುವ ಮುನ್ನ ಈ ಬೆಳವಣಿಗೆ ನಡೆದಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.