ಕಡೆಗೂ ಬಾಕಿ ಉಕಿಸಿಕೊಂಡಿದ್ದ ಕರ್ನಾಟಕದ ನಾಲ್ಕು ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬೆಳಗಾವಿ ಇಂದ ಜಗದೀಶ ಶೆಟ್ಟರ ಅವರಿಗೆ ಟಿಕೇಟ ನೀಡಲಾಗಿದೆ. ಭಾರಿ ವಿರೋಧದ ಮಧ್ಯೆಯೂ ಶೆಟ್ಟರ ಟಿಕೇಟ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನುಳಿದಂತೆ ಉತ್ತರ ಕನ್ನಡದಿಂದ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಟಿಕೇಟ ಸಿಕ್ಕಿದ್ದು, ಹಿಂದುತ್ವದ ಫೈರ್ ಬ್ರಾಂಡ ಅನಂತಕುಮಾರ ಹೆಗಡೆ ಗೆ ಕೋಕ ನೀಡಲಾಗಿದೆ. ಅಲ್ಲದೆ ಚಿಕ್ಕ ಬಳ್ಳಾಪುರದಿಂದ ಮಾಜಿ ಸಚಿವ ಕೆ ಸುಧಾಕರ ಅವರಿಗೆ ಟಿಕೇಟ ನೀಡಿದರೆ, ರಾಯಚೂರಿನಿಂದ ರಾಜಾ ಅಮರೇಶ್ವರ ನಾಯಕಗೆ ಟಿಕೇಟ್ ನೀಡಲಾಗಿದೆ.
