ಬಾಗಲಕೋಟೆ ಕಾಂಗ್ರೇಸ್ ಟಿಕೆಟ್ ಕೈ ತಪ್ಪಿದ ಪರಿಣಾಮ ಅಸಮಾಧಾನ ಹೊರ ಹಾಕಿರುವ ಕಾಂಗ್ರೆಸ್ ಆಕಾಂಕ್ಷಿ ವೀಣಾಕಾಶಪ್ಪನವರ್ ಅವರನ್ನು ಬೆಂಗಳೂರಿಗೆ ಕಾಂಗ್ರೆಸ್ ನಾಯಕತ್ವ ಆಹ್ವಾನಿಸಿದೆ.
ಇಂದು ವಿಜಯಾನಂದ ಕಾಶಪ್ಪನವರ್ ಮತ್ತು ವೀಣಾ ಕಾಶಪ್ಪನವರ್ ಇಬ್ಬರೂ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದ್ದಾರೆ. ಬಾಗಲಕೋಟ ಕ್ಷೇತ್ರಕ್ಕೆ ಟಿಕೇಟ ನೀಡದಿದ್ದಲ್ಲಿ, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನ ತೆಗೆದುಕೊಂಡ ಬೆನ್ನಲ್ಲೇ ಕಾಂಗ್ರೇಸ್ ನಾಯಕರು ವೀಣಾ ಕಾಶಪ್ಪನವರನ್ನು ಕರೆಸಿಕೊಂಡಿದ್ದಾರೆ.
ಪಂಚಮಸಾಲಿ ಸಮಾಜದ ಸಂಘಟನೆಯಲ್ಲಿ ಮುಂಚೂಣಿಯಲ್ಲಿರುವ ವಿಜಯಾನಂದ ಕಾಶಪ್ಪನವರ, ತಮ್ಮ ಪತ್ನಿಗೆ ಟಿಕೇಟ ತಪ್ಪಲು ಯಾರು ಕಾರಣ ಅನ್ನೋದು ಗೊತ್ತು, ಅವರಿಗೆ ಸೂಕ್ತ ಸಮಯದಲ್ಲಿ ಉತ್ತರ ನೀಡುತ್ತೇನೆ ಎಂದು ಎಚ್ಚರಿಸಿದ್ದಾರೆ. ಅಲ್ಲದೆ ಬಾಗಲಕೋಟ ಕ್ಷೇತ್ರದಲ್ಲಿ ಮಾಡಿದ ಅನ್ಯಾಯಕ್ಕೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕಾಂಗ್ರೇಸ್ ಮೇಲೆ ವ್ಯತಿರಿಕ್ತ ಪರಿಣಾಮ ಬಿರಲಿದೆ ಎಂದು ವಿಜಯಾನಂದ ಕಾಶಪ್ಪನವರ ಹೇಳಿದ್ದಾರೆ.
ಅನ್ಯಾಯ ಸರಿಪಡಿಸಲು 28 ನೇ ತಾರೀಖಿನ ವರೆಗೆ ಗಡವು ಕೊಟ್ಟಿದ್ದ ವಿಜಯಾನಂದ ಕಾಶಪ್ಪನವರ ಜೊತೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಸಭೆ ನಡೆಸಲಿದ್ದಾರೆ.