ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಇಂದು ಜಗದೀಶ ಶೆಟ್ಟರರನ್ನು ಬೆಳಗಾವಿಯ ಸಂಸದೆ, ಮಂಗಳಾ ಅಂಗಡಿಯವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಜಗದೀಶ ಶೆಟ್ಟರ ಅವರಿಗೆ ಶುಭ ಹಾರೈಸಿದ ರಮೇಶ ಜಾರಕಿಹೊಳಿ, ಗೆಲ್ಲಿಸಿಕೊಡುವದಾಗಿ ಭರವಸೆ ನೀಡಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕೈಗೊಳ್ಳಬೇಕಾದ ಪ್ರಚಾರ ಸಭೆ, ಸಂಘಟನೆ ಬಗ್ಗೆ ಉಭಯ ನಾಯಕರು ಮಾತುಕತೆ ನಡೆಸಿದರು. ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕಡು ವಿರೋಧಿ ಎಂದೆ ಹೆಸರಾದ ರಮೇಶ ಜಾರಕಿಹೊಳಿ ಜಗದೀಶ ಶೆಟ್ಟರ ಅವರ ಚುನಾವಣೆಯನ್ನು ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದಾರೆ.