ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಫಕೀರ ದಿಂಗಾಲೇಶ್ವರ ಶ್ರೀಗಳು, ಪಕ್ಷೇತರ ಅಭ್ಯರ್ಥಿಯಾಗಿಯೇ ಸ್ಪರ್ಧಿಸಬೇಕು ಎಂದು ವೀರಶೈವ ಲಿಂಗಾಯತ ಮುಖಂಡರು ಆಗ್ರಹಿಸಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದವರು ಮೂರು ಪಕ್ಷಗಳಲ್ಲಿದ್ದು, ಯಾವದೇ ಪಕ್ಷದ ಬೆಂಬಲ ಅಥವಾ ಪಕ್ಷದ ಅಭ್ಯರ್ಥಿಯಾದರೆ ಸಂಘಟಿತ ಪ್ರಯತ್ನ ಆಗಲ್ಲ ಎಂದು ಹೇಳಿದ್ದಾರೆ.
ನಿನ್ನೆಯಷ್ಟೆ ದಿಂಗಾಲೇಶ್ವರ ಶ್ರೀಗಳು ಕಾಂಗ್ರೇಸ್ ಅಭ್ಯರ್ಥಿಯಾಗಲಿದ್ದಾರೆ ಎಂದು ಸುದ್ದಿ ಹರದಾಡಿತ್ತು. ಈ ಸುದ್ದಿ ಭಕ್ತರ ವಲಯದಲ್ಲಿ ವ್ಯಾಪಕ ಚರ್ಚೆಯಾಗಿತ್ತು. ಶ್ರೀಗಳು ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧೆ ಮಾಡಬೇಕು ಎಂದು ಮುಖಂಡರಾದ, ನಾಗನಗೌಡ, ಗಂಗಣ್ಣನವರ, ದೇಸಾಯಿ, ಎಸ್ ಎಮ್ ಹಿರೇಮಠ ಸೇರಿದಂತೆ ಮುಂತಾದ ಮುಖಂಡರು ಒತ್ತಾಯ ಮಾಡಿದ್ದಾರೆ.