ಧಾರವಾಡ ಜಿಲ್ಲೆಯಲ್ಲಿ ಲೋಕಸಭಾ ಅಖಾಡಾ ಜೋರಾಗಿದೆ. ದಿಂಗಾಲೇಶ್ವರರ ಪ್ರವೇಶದಿಂದ ತ್ರಿಕೋಣ ಸ್ಪರ್ಧೆ ನಡೆಯಲಿದ್ದು, ದಿನಕ್ಕೂಂದು ಲೆಕ್ಕಾಚಾರ ಹಾಕಲಾಗುತ್ತಿದೆ.
ಇದೆಲ್ಲದರ ಮಧ್ಯೆ ಮಹಾದಾಯಿ ಹೋರಾಟಗಾರ ವಿರೇಶ ಸೊಬರದಮಠ, ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಮಹತ್ವದ ಸುದ್ದಿಗೋಷ್ಟಿ ಕರೆದಿದ್ದಾರೆ. ಹುಬ್ಬಳ್ಳಿ, ಧಾರವಾಡದಲ್ಲಿ ಏನೇನು ಗೋಲ್ಮಾಲ್ ನಡೆದಿದೆ. ಯಾರೆಲ್ಲ ಶಾಮೀಲು ಆಗಿದ್ದಾರೆ ಅನ್ನೋದರ ಬಗ್ಗೆ ಮಾಹಿತಿ ಹೊರಹಾಕಲಿದ್ದಾರೆ.
11-30 ಕ್ಕೆ ಹುಬ್ಬಳ್ಳಿಯ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸುವ ಸೊಬರದಮಠ, ಗೋಲ್ಮಾಲ್ ಕುರಿತು ನ್ಯಾಯಾಲಯದ ಮೆಟ್ಟಿಲು ಸಿದ್ದರಾಗಿದ್ದಾರೆ.